ಬುಧವಾರ, ಫೆಬ್ರವರಿ 24, 2021
18 °C

‘ಪೊಗರು’ ನಿರ್ದೇಶಕರ ಮೇಲೆ ಕ್ರಮಕೈಗೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಹೇಳನ ಮಾಡಲಾಗಿದೆ. ಚಿತ್ರದ ನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಬ್ರಾಹ್ಮಣ ಸಮಾಜದ ಮುಖಂಡ ಪ್ರಲ್ಹಾದ್‌ ರಾವ್ ಹೇರೂರು ಒತ್ತಾಯಿಸಿದ್ದಾರೆ.

‘ಪೊಗರು ಚಿತ್ರದಲ್ಲಿ ಅರ್ಚಕರ ಮೇಲೆ ಕಾಲಿಟ್ಟು ಅವರನ್ನು ಅವಮಾನಿಸಲಾಗಿದೆ. ಇದರಿಂದ ಬ್ರಾಹ್ಮಣ ಸಮಾಜಕ್ಕೆ ನೋವು ಉಂಟಾಗಿದೆ. ಇದು ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ತಲೆ ಮೇಲೆ ಕಾಲಿಡುವ ದೃಶ್ಯಗಳಲ್ಲದೆ, ದೇವಸ್ಥಾನಕ್ಕೆ ಮಡಿ ನೀರು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮತ್ತು ಹೋಮ-ಹವನಗಳ ಕುಂಡಲಗಳನ್ನು ಧ್ವಂಸಗೊಳಿಸುವ ದೃಶ್ಯಗಳು ನೋವುಂಟು ಮಾಡುತ್ತವೆ’ ಎಂದು ಹೇಳಿದರು.

ಕೂಡಲೇ ನಿರ್ದೇಶಕರು ಚಿತ್ರದಲ್ಲಿರುವ ಅಪಮಾನಕರ ದೃಶ್ಯಗಳನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.