ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕನೂರು | ಕಲುಷಿತ ನೀರು: ಗ್ರಾಮಸ್ಥರ ಆಕ್ರೋಶ

Published 12 ಜೂನ್ 2024, 15:40 IST
Last Updated 12 ಜೂನ್ 2024, 15:40 IST
ಅಕ್ಷರ ಗಾತ್ರ

ಕುಕನೂರು: ತಾಲ್ಲೂಕಿನ ಕುದುರಿಮೋತಿ ಗ್ರಾಮದ‌ ಎಸ್‌ಸಿ ಕಾಲೊನಿಯಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ಗ್ರಾಮದ ಕಾಲೋನಿಯಲ್ಲಿ ಹಲವು ದಿನಗಳಿಂದ ಮಣ್ಣು, ಕಸ ಮಿಶ್ರಿತ ನೀರು ಬರುತ್ತಿದೆ. ಈ ಬಗ್ಗೆ ಸದಸ್ಯರಾಗಲಿ, ಪಂಚಾಯತಿ ಸಿಬ್ಬಂದಿಗಳಾಲಿ ಕ್ಯಾರೆ ಏನದಿರುವುದಕ್ಕೆ ರೋಸಿ ಹೋದ ಯುವಕರು, ಕಾಲೋನಿ ಜನರು ಸೇರಿ ಇಂದು ಗ್ರಾಮ ಪಂಚಾಯತಿ ಮುತ್ತಿಗೆ ಹಾಕಿ, ವಾರ್ಡ್ ಸದಸ್ಯರು ಮತ್ತು ನೀರು ಸರಬರಾಜು ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.

ಸಂಬಂಧ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರಿದಾ ಬೇಗಂ, ಗ್ರಾಮದಲ್ಲಿ ಸುಮಾರು ಒಂದು ವಾರದಿಂದ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಅಲ್ಲಲ್ಲಿ ನೀರಿನ ಪೈಪ್ ಗಳು ಒಡೆದಿವೆ, ಹಾಗಾಗಿ ನೀರು ಕಲುಷಿತವಾಗಿದೆ. ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದು ಕೂಡಲೇ ಕಾರ್ಯಪ್ರವೃತ್ತರಾಗಲಿದ್ದಾರೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುವುದು ಎಂದರು.

ವಾರ್ಡಿನ ಸದಸ್ಯರ ಮಂಜುನಾಥ್ ಸಜ್ಜನ್, ವಿಜಯಲಕ್ಷ್ಮಿ ದಾಸರ್, DSS ಜಿಲ್ಲಾ ಸಂಚಾಲಕ ಭೀಮಪ್ಪ ಕೆಂಗಾರ್, ಸಂತೋಷ್ ಕಾಳಿ, ಶರಣಪ್ಪ, ಶಿವಮೂರ್ತಿ ಕಾಳಿ, ಹುಸೇನ್ ಭಾಷಾ ಅಂಗಡಿ, ವಿಜಯ ಕುಮಾರ್ ದಾಸರ್, ಪರಶರಾಮ ನಡುಲರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT