ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ಅಂಚೆ ಜನ ಸಂಪರ್ಕ ಅಭಿಯಾನ

Published 6 ಅಕ್ಟೋಬರ್ 2023, 7:31 IST
Last Updated 6 ಅಕ್ಟೋಬರ್ 2023, 7:31 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಕೊಪ್ಪಳ ರಸ್ತೆಯಲ್ಲಿರುವ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಅಂಚೆ ಇಲಾಖೆ ಯಿಂದ ಅಂಚೆ ಜನ ಸಂಪರ್ಕ ಅಭಿಯಾನ ನಡೆಯಿತು.

ಅಂಚೆ ಅಧೀಕ್ಷಕ ನಿಂಗನಗೌಡ ಜಿ. ಭಂಗಿಗೌಡ್ರು ಮಾತನಾಡಿ,‘ಅಂಚೆ ಇಲಾಖೆ ಪತ್ರ ವ್ಯವಹಾರಗಳಿಂದ ಆರಂಭವಾಗಿ ಇಲ್ಲಿವರೆಗೆ ಸಾಕಷ್ಟು ಬದಲಾವಣೆಗಳು ಕಂಡು ಪತ್ರವ್ಯವಹಾರ, ಠೇವಣಿ ಜಮಾ, ಬ್ಯಾಂಕ್ ಖಾತೆಗಳ ಆರಂಭ, ಜೀವ ವಿಮಾ ಪಿಂಚಣಿ ಯೋಜನೆಗಳನ್ನ ಗ್ರಾಹಕರಿಗೆ ತಲುಪಿಸುವ ಹೊಣೆಗಾರಿಕೆ ಹೊತ್ತು ಸಾಗುತ್ತಿದೆ ಎಂದರು.

‘ಇಲ್ಲಿ ಹಣ ಠೇವಣಿ ಮಾಡುವ ಗ್ರಾಹಕರಿಗೆ ಸೂಕ್ತ ಬಡ್ಡಿ, ಸಾಲ ಸೌಲಭ್ಯಗಳಿಗೆ ಕಡಿಮೆ ಬಡ್ಡಿ ಒದಗಿಸುತ್ತದೆ. ಜನರು ಖಾಸಗಿ ಪೈನಾನ್ಸ್ ಸಂಸ್ಥೆಗಳಿಗೆ ಮಾರುಹೋಗದೆ ಸರ್ಕಾರ ಅಂಚೆ ಇಲಾಖೆಯಲ್ಲಿ ವ್ಯವಹಾರ ನಡೆಸಬೇಕು ಎಂದರು.

ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಶಿ. ಕುಲಕರ್ಣಿ, ಸೋಮಶೇಖರ ಎಸ್. ಮುದಗಲಿ, ಉಷಾ ಕುಲಕರ್ಣಿ, ವಿರುಪಾಕ್ಷಪ್ಪ ಸಿರವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT