ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಕಣ್ಣಿಗೆ ಜೀವ ತುಂಬಿದ ಶ್ರೀನಿವಾಸ

Last Updated 28 ಮಾರ್ಚ್ 2021, 4:23 IST
ಅಕ್ಷರ ಗಾತ್ರ

ಗಂಗಾವತಿ: ‘ಫೋಟೊಗ್ರಫಿ’ ಎನ್ನುವುದು ಒಂದು ತಪಸ್ಸು. ಅದು ಎಲ್ಲರಿಗೂ ದಕ್ಕುವುದಿಲ್ಲ. ಆದರೆ, ಅದಮ್ಯವಾದ ಉತ್ಸಾಹದ ಮೂಲಕ ಭತ್ತದ ನಾಡಿನ ಶ್ರೀನಿವಾಸ ಎಣ್ಣಿ ಆ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ.

ಕೆಪಿಟಿಸಿಎಲ್‌ನಲ್ಲಿ ಕಿರಿಯ ಎಂಜಿನಿಯರ್‌ ಆಗಿರುವ ಶ್ರೀನಿವಾಸ್‌ ಅವರ ಈ ಕಲಾ ಪ್ರಯಾಣ ಶುರುವಾಗಿದ್ದು 2015 ರಲ್ಲಿ. ಆರಂಭದಲ್ಲಿ ಸಮಸ್ಯೆ ಎದುರಿಸಿ, ಬಳಿಕ ಮೈಕೊಡವಿ ನಿಂತ ಶ್ರೀನಿವಾಸ ಅಂತರರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸುವ ಮಟ್ಟಕ್ಕೆ ಬೆಳೆದರು.

ಶ್ರೀನಿವಾಸ ಅವರಿಗೆ ಪ್ರಸಿದ್ಧ ಛಾಯಾಚಿತ್ರಕಾರರಾದ ರಘುಬೀರ್‌ ಸಿಂಗ್‌ ಹಾಗೂ ರಘು ರೈ ಅವರು ಪ್ರೇರಣೆ. ಯೂಟ್ಯೂಬ್‌ನಲ್ಲಿ ಫೋಟೊಗ್ರಫಿ ಪಟ್ಟುಗಳ ಕುರಿತು ತಿಳಿದುಕೊಂಡ ಅವರು ತಾವು ತೆಗೆದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಅದರಲ್ಲಿಯೇ ಛಾಯಾಚಿತ್ರಕಾರರನ್ನು ಪರಿಚಯ ಮಾಡಿಕೊಂಡು ತಮ್ಮ ಕೌಶಲವನ್ನು ಸುಧಾರಿಸಿಕೊಳ್ಳುತ್ತಾರೆ.

100 ಕ್ಕೂ ಹೆಚ್ಚು ಪದಕ ಬೇಟೆ: ಹವ್ಯಾಸವಾಗಿ ಫೋಟೊಗ್ರಫಿ ಆರಂಭಿಸಿದ ಅವರು ಬಿಡುವಾದಾಗ ಹಾಗೂ ರಜೆ ದಿನಗಳಲ್ಲಿ ಕ್ಯಾಮೆರಾ ಹೆಗಲಿಗೇರಿಸಿಕೊಂಡು ಊರೂರು ಸುತ್ತುತ್ತ ಉತ್ತಮ ಚಿತ್ರಗಳನ್ನು ಸೆರೆಹಿಡಿಯುತ್ತ ಬಂದಿದ್ದಾರೆ.

ಸೆರೆಹಿಡಿದ ಚಿತ್ರಗಳನ್ನು ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವ ಮೂಲಕ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದುವರೆಗೂ ಸುಮಾರು 25 ದೇಶಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. 100 ಕ್ಕೂ ಹೆಚ್ಚು ಪದಕಗಳು ಇವರನ್ನು ಅರಸಿ ಬಂದಿವೆ.

ಐತಿಹಾಸಿಕ ಸ್ಮಾರಕಗಳು, ಕ್ರೀಡೆ, ಹಬ್ಬ, ಇತರ ಆಚರಣೆಗೆ ಸಂಬಂಧಿಸಿದ ಹಾಗೂ ವಾರಣಾಸಿ, ಕೇರಳ, ಕೊಲ್ಲಾಪುರ, ಕಾಶಿಯಲ್ಲಿ ಇವರು ತೆಗೆದ ಚಿತ್ರಗಳು ನೋಡುಗರನ್ನು ನಿಬ್ಬೆರಗಾಗಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT