ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ: ಛಾಯಾಗ್ರಾಹಕನ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

Published 24 ಮೇ 2024, 14:02 IST
Last Updated 24 ಮೇ 2024, 14:02 IST
ಅಕ್ಷರ ಗಾತ್ರ

ಗಂಗಾವತಿ: ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ವೃತ್ತಿಪರ ಛಾಯಾಗ್ರಾಹಕನ ಮೇಲೆ ನಡೆದ ಹಲ್ಲೆ ಖಂಡಿಸಿ ಗುರುವಾರ ಗಂಗಾವತಿ ತಾಲ್ಲೂಕು ಫೋಟೊಗ್ರಾಫರ್ ಮತ್ತು ವಿಡಿಯೊಗ್ರಾಫರ್ ಸಂಘದ ಸದಸ್ಯರು ಶಿರಸ್ತೆದಾರ ರವಿಕುಮಾರ ನಾಯಕವಾಡಿಗೆ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಅಧ್ಯಕ್ಷ ಚಾಂದ್ ಪಾಷ ಮಾತನಾಡಿ, ಶಿವಾಜಿನಗರ ಕಲ್ಯಾಣ ಮಂಟಪದ‌ ಮದುವೆ ಸಮಾರಂಭದಲ್ಲಿ ಛಾಯಾಗ್ರಾಹಕ ಛಾಯಚಿತ್ರಗಳನ್ನು ಸೆರೆ ಹಿಡಿಯುವ ವೇಳೆ ವಧುವಿನ ಸಹೋದರ ಮತ್ತು ಸಂಗಡಿಗರು ಮಾರಣಾಂತಿಕವಾಗಿ ಹಲ್ಲೆನಡಿಸಿ, ಕ್ಯಾಮೆರಾ ಸಾಮಗ್ರಿಗಳನ್ನು ನಾಶಪಡಿಸಿದ್ದಾರೆ. ಬದುಕಿನ ಬಂಡಿ ಸಾಗಿಸಲು ಛಾಯಾಗ್ರಾಹಕರು ಪೋಟೋ, ವಿಡಿಯೊ ಚಿತ್ರೀಕರಣ ಮಾಡುತ್ತಿದ್ದು, ಇಲ್ಲಸಲ್ಲದ ವಿಚಾರಗಳಿಗೆ ವಧು ಮತ್ತು ವರರ ಕಡೆಗಿನ ಸಂಬಂಧಿಕರು ಜಗಳವಾಡಿ, ಹಲ್ಲೆ ನಡೆಸುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದ್ದು, ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಜತೆಗೆ ಶಿವಾಜಿನಗರದಲ್ಲಿ ಪೋಟೊಗ್ರಾಫರ್ ಮೇಲೆ ಹಲ್ಲೆ ನಡೆಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗೌರವಾಧ್ಯಕ್ಷ ಶ್ರೀಕಾಂತಸಾ ರಾಯಬಾಗಿ, ಉಪಾಧ್ಯಕ್ಷ ನಾಗರಾಜ ಉಪ್ಪಿ, ಕಾರ್ಯದರ್ಶಿ ವಿರುಪಾಕ್ಷಿ, ಹುಸೇನ್ ಬಂಡ್ರಾಳ, ನಾಗರಾಜ, ಷಡಕ್ಷರಯ್ಯ, ಕಾಂತೇಶ, ತಾಯಪ್ಪ, ಭದ್ರಿ, ವಿನಾಯಕ, ಬಸವರಾಜ ಭಾಗವಹಿಸಿದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT