ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗೆ ಆಸಕ್ತಿಯೇ ಕಾರಣ: ಅಭಿನವ ಗವಿಶ್ರೀ

Last Updated 29 ಜುಲೈ 2021, 6:34 IST
ಅಕ್ಷರ ಗಾತ್ರ

ಕೊಪ್ಪಳ: 'ಮನುಷ್ಯನ ಸಾಧನೆಗೆ ಆಸಕ್ತಿಯೇ ಮೂಲ ಕಾರಣ' ಎಂದು ಗವಿಮಠದ ಅಭಿನವ ಗವಿಸಿದ್ದೇಶ್ವರಸ್ವಾಮೀಜಿ ಹೇಳಿದರು.

ಅವರು ಪಟ್ಟಣದ ಜ್ಞಾನ ಬಂಧುಪಿಯು ಕಾಲೇಜುಹಾಗೂ ನೂತನವಾಗಿ ನಿರ್ಮಾಣಗೊಂಡ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡ ಉದ್ಘಾಟಿಸಿ ಮಾತನಾಡಿ 'ಮನುಷ್ಯ ಏನಾದದರೂ ಒಂದು ಸಾಧನೆಗೈಯಲು ಅವನಲ್ಲಿನ ಆಸಕ್ತಿ, ಶ್ರದ್ಧೆ ಹಾಗೂ ಪರಿಶ್ರಮಗಳೇ ಕಾರಣ. ಕಾಲೇಜಿನ ಅಧ್ಯಕ್ಷ ದಾನಪ್ಪ ಕವಲೂರು ಅವರ ಕಾರ್ಯತತ್ಪರತೆ ಶ್ಲಾಘನೀಯ ಎಂದರು.

ಉದ್ಯಮಿ ಶ್ರೀನಿವಾಸ ಗುಪ್ತಾ ಮಾತನಾಡಿ 'ನೂತನವಾಗಿ ಆರಂಭಗೊಂಡ ಜ್ಞಾನ ಬಂಧು ಕಾಲೇಜು ತನ್ನ ಶೈಕ್ಷಣಿಕ ಧ್ಯೇಯೋದ್ದೇಶ ಸಾಧಿಸಿ, ಉನ್ನತ ಮಟ್ಟಕ್ಕೆ ಬೆಳೆಯಲಿ. ಭವಿಷ್ಯದಲ್ಲಿ ಪ್ರಮುಖ ಶಿಕ್ಷಣ ಕೇಂದ್ರವಾಗಿ ಹೊರಹೊಮ್ಮಲಿ' ಎಂದು ಆಶಿಸಿದರು.

ವಿಶ್ವನಾಥ.ಜಿ.ಎಸ್‌, ಹಳೆಯ ವಿದ್ಯಾರ್ಥಿನಿ ವೈದ್ಯೆ ಡಾ.ಅನುರಾಧ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕೆಲವು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷದಾನಪ್ಪ ಕವಲೂರು ಮಾತನಾಡಿ, 'ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರಾರಂಭಿಸಿರುವ ಜ್ಞಾನ ಬಂಧುಪಿಯು ಕಾಲೇಜು ಕುರಿತು ತಮ್ಮ ಆಶೋತ್ತರ ವಿವರಿಸಿ, ಪ್ರಸ್ತುತ ದಿನಮಾನಗಳಿಗೆ ತಕ್ಕಂತೆ ಮಕ್ಕಳಿಗೆ ಬೇಕಾದ ಪೂರಕ ಶಿಕ್ಷಣ ಹಾಗೂ ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ಕಾಲೇಜಿನ ಕಟ್ಟಡ ಹಾಗೂ ಅನುಭವಿ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ ಕಾಲೇಜಿಗೆ ದಾಖಲಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಹಾಗೂ ಪಾಲಕರ-ಪೋಷಕರ ನಿರೀಕ್ಷೆಗಳನ್ನು ತಪ್ಪದೇಈಡೇರಿಸುವ ಕುರಿತು ಭರವಸೆ ನೀಡಿದರು.

ಬಸವರಾಜ.ಎಸ್‌.ಗೌಡರ, ಉಪಪ್ರಾಚಾರ್ಯೆ ಜ್ಯೋತಿ ಎಸ್.ಎಸ್,‌ ಸಂಸ್ಥೆಯ ಶಿಕ್ಷಕ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮಧು ಹಾಗೂ ಸಂಘಡಿಗರು ಪ್ರಾರ್ಥಿಸಿದರು, ನಿಂಗಮ್ಮ.ಪಿ. ಸ್ವಾಗತಿಸಿ ವಂದಿಸಿದರು. ಮಲ್ಲಿಕಾರ್ಜುನ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT