ವಿದ್ಯಾರ್ಥಿಗಳನ್ನು ಕರೆತರುವ ಸವಾಲು
ಫಲಿತಾಂಶ ಸುಧಾರಣೆಗೆ ಇಲಾಖೆ ಮತ್ತೊಮ್ಮೆ ಪಾಠ ಮಾಡಲು ಮುಂದಾಗಿದ್ದರೂ ವಿದ್ಯಾರ್ಥಿಗಳನ್ನು ಕರೆತರುವುದೇ ಸವಾಲಾಗಿದೆ. ಈಗಾಗಲೇ ಆಯಾ ಕಾಲೇಜುಗಳ ಉಪನ್ಯಾಸಕರು ಮತ್ತು ಸಿಬ್ಬಂದಿ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮರಳಿ ತರಗತಿಗೆ ಹಾಜರಾಗುವಂತೆ ಹೇಳಿದ್ದಾರೆ. ಇದರಲ್ಲಿ ಬಹಳಷ್ಟು ಜನ ಆಸಕ್ತಿ ತೋರಿಸುತ್ತಿಲ್ಲ. ಉಪನ್ಯಾಸಕರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಫೋನ್ ಕರೆ ಮಾಡಿಯೂ ತರಗತಿಗಳಿಗೆ ಕಳಿಸುವಂತೆ ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ.
ಜಿಲ್ಲೆಯ ಫಲಿತಾಂಶ ಕುಸಿತವಾಗಿದ್ದಕ್ಕೆ ಉಪನ್ಯಾಸಕರಾಗಿ ನಮಗೂ ಬೇಸರವಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಮ್ಮ ರಜೆ ಬಿಟ್ಟು ಪಾಠ ಮಾಡುತ್ತೇವೆ. ನಮಗೆ ಇರುವಷ್ಟು ಆಸಕ್ತಿ ವಿದ್ಯಾರ್ಥಿಗಳಿಗೂ ಇರಬೇಕಲ್ಲವೇ. ಅನುತ್ತೀರ್ಣ ವಿದ್ಯಾರ್ಥಿಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇನ್ನು ಕೆಲ ಕಾಲೇಜುಗಳಲ್ಲಿ ಪಾಠ ಕೇಳುವವರೇ ಬರುತ್ತಿಲ್ಲ ಎಂದು ಕೊಪ್ಪಳ ತಾಲ್ಲೂಕಿನ ಹೆಸರು ಹೇಳಲು ಬಯಸದ ಉಪನ್ಯಾಸಕರೊಬ್ಬರು ಬೇಸರ ಹೊರಹಾಕಿದರು.