ಸೋಮವಾರ, ಜೂನ್ 21, 2021
29 °C

‘ಹೆಚ್ಚಿನ ಬೆಲೆಗೆ ಮಾರಿದರೆ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ‘ಲಾಕ್‌ಡೌನ್‌ ವೇಳೆ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕಾನೂನು ಮತ್ತು ಮಾಪನಶಾಸ್ತ್ರ ಇಲಾಖೆ ಅಧಿಕಾರಿ ಎಂ.ಬದಿಯೂದ್ದೀನ್ ಅಹ್ಮದ್ ಹೇಳಿದರು.

ಪಟ್ಟಣದ ವಿವಿಧ ದಿನಸಿ ಅಂಗಡಿ ಹಾಗೂ ಇನ್ನಿತರ ವ್ಯಾಪಾರಸ್ಥರ ಬಳಿ ಹೋಗಿ ದರಗಳ ಕುರಿತು ಮಾಹಿತಿ ಪಡೆದು ಮಾತನಾಡಿದರು.

ತೂಕದಲ್ಲಿ ಮೋಸ ಮಾಡಬಾರದು. ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸುವ ಕೆಲಸ ಮಾಡಬೇಕು ಎಂದರು.

ಕೆಲ ವ್ಯಾಪಾರಿಗಳು ಲಾಕ್‍ಡೌನ್ ಸಂದರ್ಭ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಕಚೇರಿಗೆ ದೂರುಗಳು ಬಂದಿವೆ. ಅಂಗಡಿ ಮುಚ್ಚಿದ್ದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬಂದ ಗ್ರಾಹಕರ ಅವಶ್ಯಕತೆಯನ್ನು ದುರುಪಯೋಗಪಡಿಸಿ
ಕೊಳ್ಳುತ್ತಿರುವ ವ್ಯಾಪಾರಿಗಳ ಪರವಾನಿಗೆ ರದ್ಧುಪಡಿಸಬೇಕಾಗುತ್ತದೆ. ದೇಶದ ಜನತೆ ಕೋವಿಡ್‍ದಿಂದ ನರಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅಧಿಕ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವುದು ಸರಿಯಲ್ಲ. ವ್ಯವಹಾರದ ನೈತಿಕತೆಯಲ್ಲ. ವ್ಯಾಪಾರಸ್ಥರಲ್ಲಿಯೂ ನೀತಿ ನಿಯತ್ತು ಇರುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಮಾಪನ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.