ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Koppal Rains | ಕೊಪ್ಪಳ: ಜನರಿಗೆ ಹರ್ಷ ತಂದ ಮಳೆ

Published 22 ಏಪ್ರಿಲ್ 2024, 11:06 IST
Last Updated 22 ಏಪ್ರಿಲ್ 2024, 11:06 IST
ಅಕ್ಷರ ಗಾತ್ರ

ಕೊಪ್ಪಳ: ಬಿರುಬಿಸಿಲಿಗೆ ಬಸವಳಿದ ಹೋಗಿದ್ದ ಜಿಲ್ಲೆಯ ಜನರಿಗೆ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಖುಷಿ ನೀಡುತ್ತಿದೆ. ಸೋಮವಾರ ಅರ್ಧ ಗಂಟೆಗೂ ಹೆಚ್ಚು ಕಾಲ ಬಂದ ಮಳೆ ಜನರ ಸಂಭ್ರಮಕ್ಕೆ ಕಾರಣವಾಗಿತ್ತು.

ಬೆಳಿಗ್ಗೆಯಿಂದಲೇ ಸಾಕಷ್ಟು ಬಿಸಿಲಿತ್ತು. ಝಳವೂ ಹೆಚ್ಚಿತ್ತು. ಇದರಿಂದಾಗಿ ಜನ ಪರದಾಡಿ ತಂಪು ಪಾನೀಯಗಳ ಮೊರೆ ಹೋಗಿದ್ದರು. ಎರಡು ದಿನಗಳ ಹಿಂದೆ ಒಂದಷ್ಟು ಹೊತ್ತು ಜಿಲ್ಲೆಯಲ್ಲಿ ಸುರಿದಿದ್ದ ಮಳೆ ಮತ್ತೆ ಬಂದಿದ್ದರಿಂದ ಜನರ ಸಡಗರ ಹೆಚ್ಚಾಗಿತ್ತು.

ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದರೂ ಹಲವು ಜನ ಮಳೆಯಲ್ಲಿ ನೆಂದುಕೊಂಡು ಖುಷಿ ಅನುಭವಿಸಿದರು. ಮಾರುಕಟ್ಟೆಗೆ ಬಂದವರು ತಲೆಯ ಮೇಲೆ ಸಾಮಗ್ರಿ ಚೀಲ ಹೊತ್ತು ಸಾಗಿದರು. ಮಳೆಯ ನಡುವೆಯೇ ಮಕ್ಕಳು ಸೈಕಲ್‌ ಹೊಡೆದುಕೊಂಡು ಹೋಗುತ್ತಿದ್ದ ಚಿತ್ರಣ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT