ಗಂಗಾವತಿ ಹಿರೇಜಂತಕಲ್ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ 3ನೇ ಹಂತದ ನಿರ್ಮಲ ತುಂಗಭದ್ರ ಅಭಿಯಾನದ ರಥಯಾತ್ರೆ ವಾಹನಕ್ಕೆ ಗಣ್ಯರು ಚಾಲನೆ ನೀಡಿದರು
ತುಂಗಭದ್ರ ನದಿ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. 2ನೇ ಹಂತದಲ್ಲಿ ಈಗಾಗಲೇ ತುಂಗಾಭದ್ರ ನದಿ ರಕ್ಷಣೆ ಅಭಿಯಾನ ಯಶಸ್ವಿಯಾಗಿ ನಡೆದಿದ್ದು ಖುಷಿಯಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಮತ್ತು ನದಿಗಳು ನೀಡುವುದು ನಮ್ಮೆಲ್ಲರ ಹೊಣೆಯಾಗಿದೆ
ಪರಣ್ಣ ಮುನವಳ್ಳಿ ಮಾಜಿ ಶಾಸಕರು ಗಂಗಾವತಿ
ಗಂಗೆಯನ್ನು ದೇವತೆಗೆ ಹೋಲಿಸುತ್ತೇವೆ. ಅದರ ರಕ್ಷಣೆ ಮಾತ್ರ ಯಾರು ಮುಂದಾಗುತ್ತಿಲ್ಲ. ಸರ್ಕಾರ ಎಚ್ಚೆತ್ತು ತುಂಗಭದ್ರ ನದಿ ರಕ್ಷಣೆಗೆ ಚಿಂತನೆ ನಡೆಸಬೇಕು
ಶಿವಕುಮಾರ ಮಾಲಿಪಾಟೀಲ ಸಂಚಾಲಕ 3ನೇ ಹಂತದ ನಿರ್ಮಲ ತುಂಗಾಭದ್ರ ಅಭಿಯಾನ