ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು: ಪುಟ್ಟರಾಜರ ಕೊಡುಗೆ ಅಪಾರ; ಡಾ.ಮಹದೇವ ದೇವರು

Last Updated 28 ಆಗಸ್ಟ್ 2020, 13:27 IST
ಅಕ್ಷರ ಗಾತ್ರ

ಕುಕನೂರು: ‘ಪಂಡಿತ ಪುಟ್ಟರಾಜ ಗವಾಯಿಗಳು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಡಾ.ಮಹದೇವ ದೇವರು ಅಭಿಪ್ರಾಯಪಟ್ಟರು.

ಅನ್ನದಾನೇಶ್ವರ ಸಂಸ್ಕೃತಿ ಕಲಾ ತಂಡ, ಪಟ್ಟಣದ ಅನ್ನದಾನೇಶ್ವರ ಶಾಖಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಗಾನಯೋಗಿ ಡಾ.ಪುಟ್ಟರಾಜ ಗವಾಯಿಗಳ 10ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಧ ಗುರು, ಅಂಧ ಶಿಷ್ಯರು ಸಂಗೀತದ ಮೂಲಕ ಜಗತ್ತನ್ನೇ ಬೆಳಗುತ್ತಾರೆ ಎಂದು ಗೊತ್ತಿರಲಿಲ್ಲ. ಪುಟ್ಟಯ್ಯನವರು 8 ವರ್ಷದ ಬಾಲಕನಿರುವಾಗ ಅವರನ್ನು ಪಂಡಿತ ಪಂಚಾಕ್ಷರಿ ಮಡಿಲಿಗೆ ಒಪ್ಪಿಸಿದರಂತೆ, ಅಂಧ ಗುರುಗಳು ಅಂಧ ಶಿಷ್ಯನನ್ನು ಪಡೆದು ಸಂಗೀತದ ಮೂಲಕ ಜನರನ್ನು ಗೆಲ್ಲುತ್ತಾರೆ. ಇದು ಸರ್ವರಿಗೂ ಮಾದರಿ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಶಂಭು ಜೋಳದ, ಶರಣಯ್ಯ ಇಟಗಿ, ಬಸವರಾಜ ಅಡವಿ, ಗದಿಗೇಪ್ಪ ಪವಾಡ ಶೇಟ್ಟಿ, ಬಸವರಾಜ ಬಡಿಗೇರ, ಬಾಬಣ್ಣ ಕಜಲ್ಮನಿ, ವೀರಯ್ಯ ತೋಂಟದಾರ್ಯಮಠ ಹಾಗೂ ಶೇಖಪ್ಪ ಶಿರೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT