ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ರಸ್ತೆ ಶೀಘ್ರವಾಗಿ ದುರಸ್ತಿ ಪಡಿಸಿ

Last Updated 5 ಅಕ್ಟೋಬರ್ 2022, 14:01 IST
ಅಕ್ಷರ ಗಾತ್ರ

ಕೊಪ್ಪಳ: ನಗರದಿಂದ ಗಿಣಗೇರಾಕ್ಕೆ ಹೋಗುವ ಮಾರ್ಗದಲ್ಲಿ ಬರುವ ವೈದ್ಯಕೀಯ ಕಾಲೇಜು ಬಳಿ ರಸ್ತೆ ಮಧ್ಯಭಾಗದಲ್ಲಿಯೇ ದೊಡ್ಡ ಗುಂಡಿ ಬಿದ್ದಿದೆ. ಇದನ್ನು ಆದಷ್ಟು ಬೇಗನೆ ದುರಸ್ತಿ ಪಡಿಸಬೇಕು.

ಕೊಪ್ಪಳ–ಗಂಗಾವತಿ ಮಾರ್ಗಕ್ಕೆ ಇದು ಪ್ರಮುಖವಾದ ರಸ್ತೆಯಾಗಿದ್ದು, ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಮುಖ್ಯ ರಸ್ತೆಯೇ ಅವ್ಯವಸ್ಥೆಯ ಗೂಡಾದರೆ ಒಳಗಿನ ರಸ್ತೆಗಳ ಗತಿಯೇನು? ಬುಧವಾರ ಕೆಲ ವಾಹನಗಳ ಚಾಲಕರೇ ಮುಂಜಾಗ್ರತಾ ಕ್ರಮವಾಗಿ ಗುಂಡಿಯ ಸುತ್ತಲೂ ಕಲ್ಲುಗಳನ್ನು ಹೊಂದಿಸಿ ಸುರಕ್ಷತೆ ಮಾಡಿದ್ದಾರೆ. ಸ್ಥಳೀಯ ಆಡಳಿತ ಕೂಡಲೇ ಗಮನ ಹರಿಸಿ ದುರಸ್ತಿ ಮಾಡಬೇಕು.

–ಬಸವರಾಜ ಹಾಗೂ ಸ್ಥಳೀಯ ನಿವಾಸಿಗಳು, ಕೊಪ್ಪಳ

****

ಹೊಸ ಬಂಡಿಹರ್ಲಾಪುರಕ್ಕೆ ಬಸ್‌ ಬಿಡಿ

ಕೊಪ್ಪಳ: ಈ ಮೊದಲು ಕೊಪ್ಪಳ–ಸಾಣಾಪುರ ಬಸ್‌ ಅಗಳಕೇರಾ ಮಾರ್ಗವಾಗಿ ಒಂದು ದಿನಕ್ಕೆ ಐದು ಬಾರಿ ಸಂಚರಿಸುತ್ತಿತ್ತು. ಈಗ ಎರಡು ಸಲ ಮಾತ್ರ ಬರುತ್ತಿದ್ದು, ಇದರಿಂದ ಸ್ಥಳೀಯರಿಗೆ ನಗರ ಪ್ರದೇಶಕ್ಕೆ ಹೋಗಿ ನಿತ್ಯದ ಕೆಲಸಗಳನ್ನು ಮುಗಿಸಿಕೊಂಡು ವಾಪಸ್‌ ಬರಲು ತೊಂದರೆಯಾಗುತ್ತಿದೆ. ನೇರ ಬಸ್ ಇಲ್ಲದೇ ಅಗಳಕೇರಾ ಜನ ತೊಂದರೆ ಎದುರಿಸುವಂತಾಗಿದೆ.

ಹೊಸ ಬಂಡಿಹರ್ಲಾಪುರದಲ್ಲಿ ಆಂಗ್ಲ ಮಾಧ್ಯಮ ಹೈಸ್ಕೂಲು, ಪಿಯುಸಿ ಮತ್ತು ಪದವಿ ಕಾಲೇಜುಗಳು ಇವೆ. ಅಲ್ಲಿ ಓದುವ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಮಧ್ಯಾಹ್ನ 4 ಗಂಟೆಗೆ ಅಗಳಕೇರಾ ಮಾರ್ಗವಾಗಿ ಹೊಸ ಬಂಡಿ ಹರ್ಲಾಪುರದ ತನಕ ಮಾತ್ರ ಕೊಪ್ಪಳದಿಂದ ಬಸ್‌ ಸೌಲಭ್ಯ ಕಲ್ಪಿಸಬೇಕು. ಇದರಿಂದ ಅಗಳಕೇರಾ, ಶಿವಪುರ ಗ್ರಾಮಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೂ ಅನುಕೂಲವಾಗುತ್ತದೆ.

ಜಿ.ಎಂ. ಭೂಸನೂರಮಠ, ಅಗಳಕೇರಾ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT