ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಕಟ್ಟದ ರೈಸ್ ಮಿಲ್‌ ಮಾಲೀಕರು

ನಗರಸಭೆ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ವಸೂಲಿಗೆ ಆದೇಶ
Last Updated 7 ಜುಲೈ 2021, 7:20 IST
ಅಕ್ಷರ ಗಾತ್ರ

ಗಂಗಾವತಿ: ಕಳೆದ ಆರು ವರ್ಷಗಳಿಂದ ನಗರಸಭೆಗೆ ಆಸ್ತಿ ತೆರಿಗೆ ಕಟ್ಟದ ಕಟ್ಟಡ ಮತ್ತು ಅಕ್ಕಿ ಗಿರಣಿ ಮಾಲೀಕರಿಂದ ತೆರಿಗೆ ವಸೂಲಿ ಮಾಡುವಂತೆ ಪೌರಾಯುಕ್ತ ಅರವಿಂದ ಜಮಖಂಡಿ ಸೂಚಿಸಿದರು.

ನಗರದ ಲಯನ್ಸ್ ಕ್ಲಬ್ ಐ.ಎಂ.ಎ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ನಗರಸಭೆ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನ ಅಕ್ಕಿ ಗಿರಣಿ ಮಾಲೀಕರು ನಗರಸಭೆಗೆ ₹4.67 ಕೋಟಿ ಪಾವತಿಸ
ಬೇಕಿದೆ.ಅನೇಕಬಾರಿ ವಿನಾಯಿತಿ ನೀಡಲಾಗಿದೆ. ನೋಟಿಸ್‌ ನೀಡಿದರೂ ಕೂಡಾ ತೆರಿಗೆ ಪಾವತಿ ಮಾಡಿಲ್ಲ. ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಂಡು ತೆರಿಗೆ ವಸೂಲಿ ಮಾಡಬೇಕು ಎಂದರು.

ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಮಾತನಾಡಿ,‘ಈ ಹಿಂದೆ ನಡೆದ‌ ಕೆ.ಡಿ.ಪಿ ಸಭೆಯ ಮುಖ್ಯಾಂಶ ಪರಿಶೀಲಿಸಿ, ಅನುಮೋದನೆ ಆಗದೆ ಇರುವ ಅಂಶದ ಕುರಿತು ಚರ್ಚಿಸಿದರು. ತೆರಿಗೆ ಸಂಗ್ರಹ ಮಾಡದಿದ್ದರೆ ಹೇಗೆ, ಇದರಿಂದ ನಗರದ ಅಭಿವೃದ್ಧಿ ಮಾಡಲು ಕಷ್ಟವಾಗುತ್ತಿದೆ. ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

2021ರ ಜಮಾ- ಖರ್ಚು, ಸಾಮಾನ್ಯ ಮೂಲ ಯೋಜನೆಯಡಿ ಮಂಜೂರಾದ ₹4.83 ಕೋಟಿ ಅನುದಾನ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಇದಕ್ಕೆ ಸಭೆ ಒಪ್ಪಿಗೆ ನೀಡಿತು.

ನಗರಸಭೆಯ 5ನೇ ವಾರ್ಡ್‌ನ ಸದಸ್ಯ ಮಹ್ಮದ್ ಉಸ್ಮಾನ್ ಜಾಫರ್ ‌ನಗರಸಭೆ ಸಾಮಾನ್ಯ ಸಭೆಯ ಉದ್ದೇಶ ನಗರಸಭೆ ಆಸ್ತಿ ಪತ್ತೆ ಹಚ್ಚಿ, ಕಾಪಾಡುವ ಕೆಲಸವಾಗಬೇಕು. ಅದನ್ನು ಹೊರತು ಪಡಿಸಿ ಇಲ್ಲಸಲ್ಲದ ಖ್ಯಾತೆ ತೆಗೆಯಬೇಡಿ ಎಂದು ಹೇಳಿದರು.

14ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರು ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ₹4.83 ಕೋಟಿ ಮೀಸಲಿರಿಸಲಾಗಿದೆ. ಈಗಾಗಲೇ ತಾಲ್ಲೂಕಿನಲ್ಲಿ ನೂತನವಾಗಿ5 ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣವಾಗಿದೆ. ಇವುಗಳಿಗೆ ಟೆಂಡರ್ ಆಹ್ವಾನಿಸಿ ನಿರ್ವಹಣೆ ಮಾಡಬೇಕಾಗುತ್ತದೆ.ಈ ಸಂದರ್ಭದಲ್ಲಿ ಸದಸ್ಯರು ನಗರದಲ್ಲಿ ದುರಸ್ತಿ ಆಗದೆ ಇರುವ ಘಟಕಗಳನ್ನು ದುರಸ್ತಿಗೊಳಿಸಿ, ಬೇಸಿಗೆ ಕಾಲದಲ್ಲಿ ಕುಡಿಯಲು ನೀರಿಲ್ಲ ಜನರು ಪರದಾಡಿದ್ದಾರೆ. ಈ ಕುರಿತು ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.

ಕಟ್ಟಡ ಪೂರ್ಣಗೊಂಡು ಪ್ರಮಾಣ ಪತ್ರವನ್ನು ನೀಡಲು₹1 ಸಾವಿರ ಶುಲ್ಕ ವನ್ನು ಪಡೆಯಲಾಗುತ್ತಿತ್ತು. ಇದೀಗ ನಗರ ಅಭಿವೃದ್ಧಿ ಆಗುತ್ತಿದ್ದು,₹3 ಸಾವಿರ ಪಾವತಿಸಿಕೊಳ್ಳಲು ಅನುಮೋದನೆ ನೀಡಲಾಯಿತು. ಮಧ್ಯಮ ಮತ್ತು ಉನ್ನತ ವರ್ಗದವರಿಗೆ ಹೆಚ್ಚಿನ ಶುಲ್ಕವನ್ನು ವಿಧಿಸಿ ಬಿಪಿಎಲ್ ಕಾರ್ಡ್‌ದಾರರಿಗೆ, ನಿರ್ಗತಿಕರಿಗೆ ಕಡಿಮೆ ಶುಲ್ಕ ವಿಧಿಸುವಂತೆ ಸದಸ್ಯರು ಮನವಿ ಮಾಡಿದರು.

ನೂತನವಾಗಿ125 ವಿದ್ಯುತ್‌ ಕಂಬಗಳಿಗೆ ದೀಪ ಅಳವಡಿಸಲಾಗಿದೆ. ಎಂಬ ವಿಷಯಕ್ಕೆ ವಾರ್ಡಿನ ಎಲ್ಲ ಸದಸ್ಯರು ಬೀದಿ ದೀಪಗಳು ಎಲ್ಲಿ ಅಳವಡಿಕೆಯಾಗುತ್ತಿವೆಯೋ ಗೊತ್ತೇ ಇಲ್ಲ. ಈ ವಿಷಯದ ಕುರಿತು ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳನ್ನ ಮತ್ತು ನಿರ್ವಹಣೆ ಮಾಡುವವರನ್ನ ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ಪುರಸಭೆಕಾಯ್ದೆ ಅಡಿಯಲ್ಲಿಸ್ಥಾಯಿ ಸಮಿತಿ ರಚನೆ ಮತ್ತು ನಾಮನಿರ್ದೇಶನ ವಿಷಯ ಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಅಧ್ಯಕ್ಷೆ ಮಧ್ಯೆ ಪ್ರವೇಶಿಸಿ ಸದಸ್ಯರನ್ನು ಸಮಾಧಾನಪಡಿಸಿದರು.

ಸ್ಥಾಯಿ ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸಿ ಪೌರಾಯುಕ್ತರಿಗೆ ಅರ್ಜಿ ಸಲ್ಲಿಸಿದರು. ಇವುಗಳೆಲ್ಲದರ ನಡುವೆಯೇ ನಾಮಪತ್ರವನ್ನು ಸ್ವೀಕರಿಸಿ ನಗರಸಭೆ ಅಧ್ಯಕ್ಷರು ಸಲ್ಲಿಸಿದವರು ಹೆಸರು ಮಹ್ಮದ್ ಉಸ್ಮಾನ್ ಅಬ್ದುಲ್ ಜಾಫರ್, ಪಾರ್ವತಮ್ಮ, ಸುನೀತಾ ತಿಪ್ಪಣ್ಣ ಶ್ಯಾವಿ, ಹುಲಿಗೆಮ್ಮ ನಾಗಮ್ಮ ಕಿರಿಕಿರಿ, ಮುಸ್ತಾಕ ಅಲಿ ಫಕ್ರುದ್ದೀನ್ ಹೆಸರು ಪ್ರಸ್ತಾಪಿಸಿದರು. 35ವಾರ್ಡ್‌ನ ಸದಸ್ಯರು ಸಮಸ್ಯೆಗಳನ್ನು ಪೌರಾಯುಕ್ತ ಮತ್ತು ಅಧ್ಯಕ್ಷರ ಗಮನಕ್ಕೆ ತಂದರು. ಈ ಸಮಸ್ಯೆಗಳನ್ನ ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು.

ಉಪಾಧ್ಯಕ್ಷೆಸುಧಾ ಸೋಮನಾಥ, ಆರೋಗ್ಯನಿರೀಕ್ಷಕ ನಾಗರಾಜ, ಜೀವನ್ ಸ್ವಾತಿ, ಆರ್.ಒ ಖತೀಬ್ ಸಾಬ್, ಎಇಇಅಭಿಷೇಕ್ ಕೆ.ಆರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT