ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ ಹುಂಡಿಯಲ್ಲಿ ನಾಲ್ಕು ವಿದೇಶಿ ನಾಣ್ಯಗಳು; ₹28.64 ಲಕ್ಷ ಸಂಗ್ರಹ

Published 25 ಮೇ 2023, 13:52 IST
Last Updated 25 ಮೇ 2023, 13:52 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಗ್ರಾಮ ಸಮೀಪದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣ ಗುರುವಾರ ಎಣಿಕೆ ಮಾಡಲಾಯಿತು.

ತಹಶೀಲ್ದಾರ ಮಂಜುನಾಥ ನೇತೃತ್ವದಲ್ಲಿ ಅಂಜನಾದ್ರಿ ದೇವಸ್ಥಾನ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಅದರಲ್ಲಿ ₹28,79,910 (ಮಾ 29ರಿಂದ ಮೇ 25ರವರೆಗೆ) ಹಣ ಸಂ ಗ್ರಹವಾಗಿದೆ. ಇದರಲ್ಲಿ ನಾಲ್ಕು ವಿದೇಶಿ ನಾಣ್ಯಗಳು ಪತ್ತೆಯಾಗಿವೆ.

ಇನ್ನೂ ಕಳೆದ ಬಾರಿ (ಮಾ 29)ರಂದು ಹುಂಡಿಹಣ ಎಣಿಕೆ ಮಾಡಿದ ವೇಳೆಯಲ್ಲಿ ₹ 10,64,935 ಹಣ ಸಂಗ್ರಹವಾಗಿತ್ತು. ಈ ಹುಂಡಿ ಎಣಿಕೆ ಕಾರ್ಯವು ಸಂಪೂರ್ಣ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಿತು.

ಗ್ರೇಡ್-2 ತಹಶೀಲ್ದಾರ ವಿ.ಎಚ್. ಹೊರಪೇಟಿ, ಶಿರಸ್ತೇದಾರ ಆನಂತ ಜೋಶಿ, ರವಿಕುಮಾರ ನಾಯಕವಾಡಿ, ಮೈಬೂಬ ಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ , ಮಹೇಶ ದಲಾಲ, ಶರಣಪ್ಪ ಬಿ., ಗುರುರಾಜ, ಶ್ರೀಕಂಠ, ಅನ್ನಪೂರ್ಣ, ನಾಗರತ್ನ, ನಾಗರತ್ನಮ್ಮ, ಶಿವಕುಮಾರ, ಗಾಯತ್ರಿ, ಸೈಯದ್, ಶ್ರೀರಾಮ, ಪಿ.ಕೆ.ಜಿ.ಬಿ ಬ್ಯಾಂಕ್ ಸಿಬ್ಬಂದಿ ರಾಜಶೇಖರ, ಸುನೀಲ, ವೆಂಕಟೇಶ ಇದ್ದರು‌.

ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಗುರುವಾರ ತಹಶೀಲ್ದಾರ ಮಂಜುನಾಥ ನೇತೃತ್ವದಲ್ಲಿ ಹುಂಡಿಹಣ ಎಣಿಕೆ ಮಾಡಲಾಯಿತು.
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಗುರುವಾರ ತಹಶೀಲ್ದಾರ ಮಂಜುನಾಥ ನೇತೃತ್ವದಲ್ಲಿ ಹುಂಡಿಹಣ ಎಣಿಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT