ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಶುಲ್ಕ ವಸೂಲಿ ಆರೋಪ

ಎಸ್‌ಎಫ್ಐ ಪದಾಧಿಕಾರಿಗಳಿಂದ ಪ್ರತಿಭಟನೆ
Last Updated 28 ಜೂನ್ 2021, 11:50 IST
ಅಕ್ಷರ ಗಾತ್ರ

ಗಂಗಾವತಿ: ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪಾಲಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿವೆ. ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಎಸ್‌ಎಫ್ಐ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗ್ಯಾನೇಶ್ ಕಡಗದ್ ಮಾತನಾಡಿ,‘ಕಾರಟಗಿ ಹಾಗೂ ಕನಕಗಿರಿಯಲ್ಲೂ ಖಾಸಗಿ ಶಾಲೆಗಳು ಅಧಿಕ ಶುಲ್ಕ ವಸೂಲಿ ಮಾಡುತ್ತಿವೆ. ಕೋವಿಡ್‌ ಕಾರಣ ಸರ್ಕಾರ 2019-20 ನೇ ಸಾಲಿನ ಶೇ 70 ರಷ್ಟು ಶುಲ್ಕ ತೆಗೆದುಕೊಳ್ಳಲು ಆದೇಶ ಹೊರಡಿಸಿದೆ. ಆದರೆ, ಗಂಗಾವತಿಯಲ್ಲಿ ಅನೇಕ ಅನುದಾನ ರಹಿತ ಶಾಲೆಗಳು ತಮಗೆ ಮನ ಬಂದಂತೆ, ಇತಿ–ಮಿತಿಯಿಲ್ಲದೇ ಪೂರ್ಣ ಶುಲ್ಕ ಕಟ್ಟಿ, ಇಲ್ಲ. ನಿಮ್ಮ ಮಕ್ಕಳ ಟಿ.ಸಿ ತೆಗೆದುಕೊಂಡು ಹೋಗಿ ಎಂದು ಪಾಲಕರಿಗೆ ಬೆದರಿಕೆ ಒಡ್ಡುತ್ತಿವೆ’ ಎಂದು ಹೇಳಿದರು.

ಪ್ರಾಥಮಿಕ ಶಾಲೆಗಳಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತೇವೆ. ನೀವೂ ಅರ್ಧ ಶುಲ್ಕ ಕಟ್ಟಬೇಕು ಎಂದು ಪಾಲಕರಿಗೆ ಈಗಾಗಲೇ ಮೊಬೈಲ್ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದರು.

ಒಂದು ವೇಳೆ ಶುಲ್ಕ ಕಟ್ಟಲಿಲ್ಲ ಎಂದರೇ ನಿಮ್ಮ ಮಗುವಿಗೆ ಆನ್‌ಲೈನ್‌ ತರಗತಿ ಲಿಂಕ್ ಲಭ್ಯವಾಗುವುದಿಲ್ಲ ಎಂದು ಹೆದರಿಸುತ್ತಿದ್ದಾರೆ. ಇಂಥ ಶಾಲೆಗಳ ಮಾನ್ಯತೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಪ್ರಮುಖರಾದ ಹನುಮಂತ ಮುಕ್ಕುಂಪಿ, ಶಿವುಕುಮಾರ, ಸೋಮನಾಥ, ಪಾಲಕರಾದ ದಾವಲಸಾಬ, ವಲಿಸಾಬ, ಬಾಷಾ ಹಾಗೂ ದುರುಗಮ್ಮ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT