ಬುಧವಾರ, ಸೆಪ್ಟೆಂಬರ್ 29, 2021
19 °C
ವಾಹನ ಚಲಾಯಿಸಿಕೊಂಡು ಮನೆಗೆ ತಲುಪಿಸಿ ಗೌರವ

ವಾಹನ ಚಾಲಕನಿಗೆ ವಿಶೇಷ ಬೀಳ್ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ವಾಹನ ಚಾಲಕರಾಗಿ ಮೂರು ದಶಕ ಸೇವೆ ಸಲ್ಲಿಸಿದ ಡಿ ದರ್ಜೆ ಸಿಬ್ಬಂದಿ ಚನ್ನಬಸಪ್ಪ ಹಾದಿಮನಿ ಅವರು ನಿವೃತ್ತಿ ಹೊಂದಿದ ಕಾರಣ ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ಸನ್ಮಾನಿಸಿ ತಾವೇ ವಾಹನ ಚಲಾಯಿಸಿಕೊಂಡು ಮನೆಗೆ ತಲುಪಿಸಿ ಬರುವುದರ ಮೂಲಕ ಗೌರವ ಸಲ್ಲಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಮಾತನಾಡಿ,‘ಚನ್ನಬಸಪ್ಪ ಸುಮಾರು ವರ್ಷಗಳಿಂದ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಸೇವೆ ಶ್ಲಾಘನೀಯ’ ಎಂದರು.

ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ಸಹಾಯಕ ನಿರ್ದೇಶಕಿ (ನರೇಗಾ) ಸೌಮ್ಯ ಕೆ., ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹನಮಂತಪ್ಪ ಎಚ್., ತಾಲ್ಲೂಕು ಯೋಜನಾಧಿಕಾರಿ ಆರ್.ಎಚ್ ನದಾಫ್, ವ್ಯವಸ್ಥಾಪಕ ಸಂಗಮೇಶ ಎನ್.ಪಾಟೀಲ, ವಿವಿಧ ಪಂಚಾಯಿತಿ ಪಿಡಿಒಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.