ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ಫಲಿತಾಂಶ | ಕೊಪ್ಪಳ: ಕಲಾ ವಿಭಾಗ ವಿದ್ಯಾರ್ಥಿ ಅಮಿತಾ ಜಿಲ್ಲೆಗೆ ಪ್ರಥಮ

Published 11 ಏಪ್ರಿಲ್ 2024, 7:43 IST
Last Updated 11 ಏಪ್ರಿಲ್ 2024, 7:43 IST
ಅಕ್ಷರ ಗಾತ್ರ

ಅಳವಂಡಿ: ಗ್ರಾಮದ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿ ಅಮಿತಾ ಕಾತರಕಿ ಅವರು ಪಿಯು ಪರೀಕ್ಷೆಯಲ್ಲಿ ಶೇ. 98.33 ಅಂಕ ಪಡೆಯುವ ಮೂಲಕ ಕಲಾ ವಿಭಾಗಕ್ಕೆ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

ಮೂಲತಃ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಏಣಿಗಿ ಗ್ರಾಮದ ರಾಜಭಕ್ಷಿ ಹಾಗೂ ಶಾಹಿದಾಬಿ ಅವರು ಅಮಿತಾಳ ತಂದೆ–ತಾಯಿ. ಇವರು ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ತೊಟ್ಟು ಪಿಯುಸಿಯಲ್ಲಿ ಕನ್ನಡ–98, ಇಂಗ್ಲಿಷ್‌–94, ಇತಿಹಾಸ– 100, ಸಮಾಜಶಾಸ್ತ್ರ–100, ರಾಜ್ಯಶಾಸ್ತ್ರಕ್ಕೆ 98, ಶಿಕ್ಷಣ ಶಾಸ್ತ್ರ– 100 ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಫಲಿತಾಂಶ ಪಡೆದಿದ್ದಾಳೆ.

‘ನನ್ನ ಓದಿಗೆ ತಂದೆ, ತಾಯಿ ಜೊತೆಗೆ ಮಾವ ಸಯ್ಯದ್ ಪಾಷಾ ಹು‌ಸೇನಪೀರಾ ಮುಲ್ಲಾ ಹಾಗೂ ಚಿಕ್ಕಮ್ಮ ಬಶೀರಾ ಅವರು ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದಾರೆ. ನನ್ನ ಕುಟುಂಬದ ಸಲಹೆಯಂತೆ ಅಳವಂಡಿಯ ಸಿದ್ದೇಶ್ವರ ಕಾಲೇಜಿಗೆ ಬಂದಾಗ, ಪ್ರವೇಶಾತಿ ಕೊನೆಯ ದಿನವಾಗಿತ್ತು. ಆದರೂ ಕೂಡ ನನಗೆ ಅಲ್ಲಿನ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರು ಪ್ರವೇಶಾತಿಗೆ ಅವಕಾಶ ಕಲ್ಪಿಸಿಕೊಟ್ಟರು’ ಎನ್ನುತ್ತಾರೆ ಅಮಿತಾ.

ಕಾಲೇಜಿನ ಉಪನ್ಯಾಸಕರು ಅಂದು ಹೇಳಿದ ಪಾಠವನ್ನು ಅಂದೇ ಅಭ್ಯಾಸ ಮಾಡುತ್ತಿದ್ದೇ, ಕಠಿಣ ಪರಿಶ್ರಮ ಮೂಲಕ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು. ತರಗತಿಯಲ್ಲಿ ಹೇಳಿದ ಪಾಠವನ್ನು ಅಂದೇ ಓದಿ ಮನನ ಮಾಡಿಕೊಳ್ಳುತ್ತಿದ್ದೆ. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ, ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಬಿಡಿಸುತ್ತಿದ್ದೆ. ನನ್ನ ಯಶಸ್ಸಿಗೆ ನನ್ನ ಪರಿಶ್ರಮವೇ ಕಾರಣವಾಗಿದೆ ಎಂದು ‘ಪ್ರಜಾವಾಣಿ’ಗೆ ಮಾಹಿತಿ ಹಂಚಿಕೊಂಡರು.

ಬಿಎ ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿ ಐಎಸ್ಐ ಆಗುವ ಕನಸನ್ನು ಅಮಿತಾ ಹೊಂದಿದ್ದಾಳೆ.

ಅಮಿತಾಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ, ಸ್ನೇಹಿತರು ಹಾಗೂ ಪೋಷಕರು ಹರ್ಷವನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT