ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಮಕ್ಕಳಿಗೆ ಸಂಸ್ಕಾರ ಬೇಸಿಗೆ ಶಿಬಿರ

ಸಕಲ ವ್ಯವಸ್ಥೆ ಕಲ್ಪಿಸಿದ ಖಾಸಗಿ ಶಾಲಾ ಆಡಳಿತ ಮಂಡಳಿ
Last Updated 4 ಮೇ 2019, 20:00 IST
ಅಕ್ಷರ ಗಾತ್ರ

ಕಾರಟಗಿ: ಬೇಸಿಗೆ ರಜೆ ಬಂತೆಂದರೆ ಶಿಬಿರಗಳ ಹೆಸರಲ್ಲಿ ಹಣ ಮಾಡುವ ಉದ್ದೇಶದಿಂದ ಶಿಬಿರಗಳು ನಡೆಯುವುದೇ
ಹೆಚ್ಚು. ಇದಕ್ಕೆ ಅಪವಾದವೆಂಬಂತೆ ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್‌ ಶಾಲೆಯು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಸಂಸ್ಕಾರ ಬೇಸಿಗೆ ಶಿಬಿರ ಆಯೋಜಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಲೆಯ ಮುಖ್ಯಸ್ಥೆ ಲೀಲಾ ಮಲ್ಲಿಕಾರ್ಜುನ ಹಾಗೂ ಅವರ ಪತಿ ಮಲ್ಲಿಕಾರ್ಜುನ ಬಿಜಕಲ್ ಅವರು ಕಳೆದ ಮೂರು ವರ್ಷದಿಂದ 8ರಿಂದ 14ನೇ ವಯಸ್ಸಿನ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಏಪ್ರಿಲ್‌ 25ರಿಂದ ಸಂಸ್ಕಾರ ಶಿಬಿರ ಆಯೋಜಿಸಿದ್ದು, ಮೇ 6ಕ್ಕೆ ಶಿಬಿರ ಮುಕ್ತಾಯವಾಗಲಿದೆ.

ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಆಯಾ ಕ್ಷೇತ್ರದಲ್ಲಿ ಪರಿಣತರಿಂದ ಸಂಗೀತ, ಯೋಗ, ಧ್ಯಾನ, ಭಜನೆ, ನೃತ್ಯ, ಕರಾಟೆ, ಚಿತ್ರಕಲೆ, ಮೇಹಂದಿ, ನೀತಿಕಥೆ, ಜೀವನ ಕೌಶಲ, ಶಿಸ್ತಿನ ಮಹತ್ವ, ವ್ಯಕ್ತಿತ್ವ ವಿಕಸನ, ಆರೋಗ್ಯ ತಪಾಸಣೆ ಸೇರಿದಂತೆ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗುವ ಕೌಶಲಗಳನ್ನು ಹೇಳಿಕೊಡಲಾಯಿತು.

ಹೆಚ್ಚು ಉತ್ಸಾಹದಿಂದ ಶಿಬಿರದಲ್ಲಿಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಲವು ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸಕರಿಂದ ಮಾಹಿತಿ ಪಡೆದುಕೊಂಡರು. ಹಡಪದ ಸಮಾಜದ ಮುಖಂಡರು ಶಿಬಿರಕ್ಕೆ ಬಂದಿದ್ದ ಮಕ್ಕಳಿಗೆ ಉಚಿತ ಹೇರ್‌ ಕಟಿಂಗ್ ಸೇವೆ ಮಾಡಿದರೆ, ಸ್ನೇಹಿತೆಯರು, ಸಂಬಂಧಿಗಳು ದಿನಕ್ಕೊಬ್ಬರಂತೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

‘ಸೋಮವಾರ (ಮೇ 6) ಶಿಬಿರ ಮುಕ್ತಾಯವಾಗಲಿದೆ. ಅದರೊಳಗೆ ಮಕ್ಕಳ ಆರೋಗ್ಯ ತಪಾಸಣೆ, ಹಲ್ಲುಗಳ ರಕ್ಷಣೆ, ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ವ್ಯವಸ್ಥೆ ಮಾಡಲಾಗುವುದು. ಕೊನೆಯ ದಿನ ಮಕ್ಕಳ ಪಾಲಕರನ್ನೂ ಆಹ್ವಾನಿಸಿ, ಮಕ್ಕಳಿಂದ ಪಾಲಕರಿಗೆ ಪಾದಪೂಜೆ ಮಾಡಿಸಲಾಗುವುದು. ಸಂಬಂಧದ ಪಾವಿತ್ರ್ಯತೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಗುವುದು ಎಂದು ಶಾಲೆಯ ಮುಖ್ಯಸ್ಥೆ ಲೀಲಾ ಮಲ್ಲಿಕಾರ್ಜುನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT