ಉತ್ತಮ ರಸ್ತೆಯ ಕೊರತೆಯಿಂದ ಎತ್ತಿನ ಬಂಡಿಗಳು ಓಡಾಟಕ್ಕೆ ತೊಂದರೆಯಾಗಿದೆ
ಕಿರು ನೀರು ಸರಬರಾಜು ಟ್ಯಾಂಕ್ ನಿರುಪಯುಕ್ತವಾಗಿದೆ
ತಾವರಗೇರಾ ಪಟ್ಟಣದ ಎಪಿಎಂಸಿ ಅತ್ಯಧಿಕ ಧಾನ್ಯ ಸಂಗ್ರಹ ತಾಣವಾಗಿದೆ. ಪ್ರಸ್ತುತ ವರ್ಷ ಕುಡಿಯುವ ನೀರು ಸುಸಜ್ಜಿತ ರಸ್ತೆ ನಿರ್ಮಾಣ ಇತರೆ ಅಭಿವೃದ್ಧಿ ಕಾರ್ಯ ಮಾಡಲಾಗುವದು
ಟಿ.ಸುರೇಶ ತಾವರಗೇರಾ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಕಾರ್ಯದರ್ಶಿ
ತಾವರಗೇರಾ ಎಪಿಎಂಸಿ ಆವರಣದಲ್ಲಿ ರೈತರಿಗೆ ಮೂಲಸೌಕರ್ಯಗಳು ಇಲ್ಲ. ಕಚೇರಿಯ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಕಾಂಪೌಂಡ್ ಸುಸಜ್ಜಿತ ರಸ್ತೆ ನಿರ್ಮಿಸಿದರೆ ಅನೂಕೂಲವಾಗುತ್ತದೆ
ಶರಣಪ್ಪ ಕುಂಬಾರ ಮೆಣೇದಾಳ ಗ್ರಾಮದ ರೈತ
ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಉಪ ಮಾರುಕಟ್ಟೆಗಳು ರೈತ ಸ್ನೇಹಿಯಾಗಿರಬೇಕು ಎನ್ನುವುದು ಎಲ್ಲರ ಆಶಯ. ಫಸಲುಗಳು ಮಾರಾಟಕ್ಕೆ ಪ್ರಮುಖ ವೇದಿಕೆಯಾಗಬೇಕಿರುವ ಎಪಿಎಂಸಿಗಳು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ಕೊಪ್ಪಳಕ್ಕೆ ಇತ್ತೀಚೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಭೇಟಿ ನೀಡಿದಾಗ ಎಪಿಎಂಸಿ ಕುರಿತ ಸಮಸ್ಯೆಗಳು ಅನಾವರಣವಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ವಿವಿಧ ಮಾರುಕಟ್ಟೆಗಳ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲುವ ‘ಎಪಿಎಂಸಿ ನೋಟ’ ಸರಣಿ ಬರಹ ಇಂದಿನಿಂದ ಆರಂಭವಾಗಿದೆ.