ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಗೋಡೆ ಕುಸಿತ: ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ

Published 18 ಮೇ 2024, 15:24 IST
Last Updated 18 ಮೇ 2024, 15:24 IST
ಅಕ್ಷರ ಗಾತ್ರ

ತಾವರಗೇರಾ: 5ನೇ ವಾರ್ಡ್‌ನಲ್ಲಿ ಮಹಿಳಾ ಶೌಚಾಲಯದ ಗೋಡೆ ಕುಸಿದು ಬಾನು ಬೇಗಂ ಮತ್ತು ಉಮಾಬಾಯಿ ಬಪ್ಪರಗಿ ಇಬ್ಬರು ಮೃತಪಟ್ಟು ಒಬ್ಬ ಮಹಿಳೆಗೆ ಗಾಯಗೊಂಡ ವಿಷಯ ತಿಳಿಯುತ್ತಿದ್ದಂತೆ ತಡರಾತ್ರ 2 ಗಂಟೆಗೆ ಜಿಲ್ಲಾಧಿಕಾರಿ ನಳೀನ್ ಅತುಲ್ ಬೇಟಿ ನೀಡಿ ಪರಿಹಾರ ಚೆಕ್ ವಿತರಿಸಿದರು.

ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಸ್ಥಳ ಪರಿಶೀಲಿಸಿ  ಮೃತ ಮಹಿಳೆಯರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಪ್ರಕೃತಿ ವಿಕೋಪ ನಿಧಿ ಮತ್ತು ಪಟ್ಟಣ ಪಂಚಾಯಿತಿ ಆಡಳಿತದ ಅಡಿಯಲ್ಲಿ ಮೃತರ ಕುಟುಂಬಸ್ಥರಿಗೆ ತಲಾ ₹5 ಲಕ್ಷ, ಗಾಯಗೊಂಡವರಿಗೆ ₹32 ಸಾವಿರ ಪರಿಹಾರ ಚೆಕ್ ನೀಡಿದರು.

ಕೊಪ್ಪಳ ಎಸ್ಪಿ ಯಶೋಧಾ ವಂಟಿಗೋಡಿ, ಜಿಲ್ಲಾ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ಧೇಶಕಿ ರೇಷ್ಮಾ ಹಾನಗಲ್, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ತಹಶಿಲ್ದಾರ್ ರವಿ ಎಸ್,ಅಂಗಡಿ, ಪ.ಪಂ ಮುಖ್ಯಾಧಿಕಾರಿ ನಭಿಸಾಭ ಖುದನ್ನವರ್, ಕಂದಾಯ ಇಲಾಖೆಯ ಅಧಕಾರಿಗಳು, ಪ್ರಮುಖರಾದ ಬಸನಗೌಡ ಮಾಲಿಪಾಟೀಲ, ಸ್ಥಳಿಯ ಪಿಎಎಸ್‌ಐ ಸುಜಾತಾ ನಾಯಕ್ ಉಪಸ್ಥಿರಿದ್ದರು.

ತಾವರಗೇರಾ ಪಟ್ಟಣದ 5 ನೇ ವಾರ್ಡನಲ್ಲಿ ಶುಕ್ರವಾರ ಸಂಜೆ ಮಹಿಳೆ ಶೌಚಾಲಯ ಗೋಡೆ ಕುಸಿದು ಮೃತಪಟ್ಟ ಇಬ್ಬರು ಮಹಿಳೆಯರ ಕುಟುಂಬವನ್ನು ಜಿಲ್ಲಾಧಿಕಾರಿ ನಳೀನ್ ಅತುಲ್ ತಡರಾತ್ರಿ 2 ಗಂಟೆಗೆ ಬೇಟಿ ನೀಡಿ ಸಾಂತ್ವಾನ ಹೇಳಿ ಪರಿಹಾರ ಚೆಕ್ ನೀಡಿದರು.
ತಾವರಗೇರಾ ಪಟ್ಟಣದ 5 ನೇ ವಾರ್ಡನಲ್ಲಿ ಶುಕ್ರವಾರ ಸಂಜೆ ಮಹಿಳೆ ಶೌಚಾಲಯ ಗೋಡೆ ಕುಸಿದು ಮೃತಪಟ್ಟ ಇಬ್ಬರು ಮಹಿಳೆಯರ ಕುಟುಂಬವನ್ನು ಜಿಲ್ಲಾಧಿಕಾರಿ ನಳೀನ್ ಅತುಲ್ ತಡರಾತ್ರಿ 2 ಗಂಟೆಗೆ ಬೇಟಿ ನೀಡಿ ಸಾಂತ್ವಾನ ಹೇಳಿ ಪರಿಹಾರ ಚೆಕ್ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT