ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಮುಸ್ಲಿಮ್ ಕ್ಷೇಮಾಭಿವೃದ್ಧಿ ನೌಕರರ ಸಂಘದಿಂದ ಸನ್ಮಾನ

‘ಶಿಕ್ಷಕರು ಸಮಾಜಕ್ಕೆ ಮಾದರಿಯಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಆದರ್ಶ ಶಿಕ್ಷಕ ಎಂದರೆ ರಾಧಾಕೃಷ್ಣನ್ ಅವರ ಹೆಸರು ಗುರು ಪರಂಪರೆಯಲ್ಲಿ ಇದೆ. ನಮ್ಮ ದೇಶದಲ್ಲಿ ಗುರುಗಳು ಯಾವಾಗಲೂ ಇತರರಿಗೆ ಆದರ್ಶವಾಗಿರಬೇಕು ಎಂದು ಸಮಾಜ ಬಯಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ್ ಹೇಳಿದರು.

ಅವರು ನಗರದ ಶಾದಿ ಮಹಾಲ್‌ನಲ್ಲಿ ಐಟಾ, ಎಸ್.ಐ.ಒ, ಮತ್ತು ಮುಸ್ಲಿಂ ಕ್ಷೇಮಾಭಿವೃದ್ಧಿ ನೌಕರರ ಸಂಘದ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಂದೆ ಗುರುವಿಗೆ ಮಹತ್ವ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗುರುವಿನ ಬಗ್ಗೆ ಮೊದಲಿದ್ದಷ್ಟು ಗೌರವ ಸಮಾಜಕ್ಕೆ ಇಲ್ಲ ಮತ್ತು ಅದು ಕಡಿಮೆಯಾಗುತ್ತಾ ಇದೆ. ಇಂದು ಶಿಕ್ಷಕ ಹುದ್ದೆ ಕೊಡುಕೊಳ್ಳುವ ವ್ಯವಹಾರಕ್ಕೆ ಸೀಮಿತವಾಗಿದೆ. ಶಿಕ್ಷಕರ ವೈಯಕ್ತಿಕ ಜೀವನ ತೆರೆದ ಪುಸ್ತಕದಂತೆ ಇರಬೇಕು. ಅದು ಉಳಿದಿವರಿಗೆ ಮಾದರಿಯಾಗಬೇಕು ಎಂದರು.

ಯೂಸುಫೀಯ ಮಸೀದಿಯ ಇಮಾಮ್ ಮುಫ್ತಿ ನಜೀರ್ ಅಹ್ಮದ್ ಮಾತನಾಡಿ, ಪ್ರವಾದಿಯವರು ತಮ್ಮ ವಚನದಲ್ಲಿ ಹೇಳಿದ ಹಾಗೆ ವಿದ್ಯಾರ್ಥಿಗಳಿಗೆ ಮೂರು ಜನ ತಂದೆಯರು ಇರುತ್ತಾರೆ. ಆ ಮೂರು ಜನ ಯಾರು ಎಂದರೆ ನಮ್ಮನ್ನು ಸೃಷ್ಟಿಸಿದ ದೇವರು, ಜನ್ಮ ಕೊಟ್ಟ ತಂದೆ, ನಮ್ಮನ್ನು ವಿದ್ಯೆ ಕಲಿಸಿದ ಗುರು, ಗುರುವಿಗೆ ಸಮಾಜದಲ್ಲಿ ಬಹಳ ಉನ್ನತವಾದ ಸ್ಥಾನ ಇದೆ ಎಂದರು.

ಅದಕ್ಕೆ ತಕ್ಕಂತೆ ಗುರುವಿನ ಕಾರ್ಯನಿರ್ವಹಣೆ ಕೂಡ ಬದಲಾಗಿದೆ. ಹಿಂದಿನ ಗುರುಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ಮಾದರಿಯಾಗಿರುತ್ತಿದ್ದರು. ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಸಮುದಾಯ ಶಿಕ್ಷಕವರ್ಗದಿಂದ ನಿರೀಕ್ಷಿಸುವ ಅಂಶಗಳು, ಶಿಕ್ಷಕರು ಇರುವ ರೀತಿ ಈ ಬಗ್ಗೆ ಅವಲೋಕಿಸ ಬೇಕಾದ ಅಗತ್ಯವಿದೆ. ಮಕ್ಕಳಿಗೆ ಉತ್ತಮ ನೀತಿಯನ್ನು ತಿಳಿಸಬೇಕಾದ ಎಲ್ಲರೂ ಮೊದಲು ತಾವು ವೈಯ್ಯಕ್ತಿಕವಾಗಿ ನೈತಿಕವಾಗಿರಬೇಕು ಎಂದರು.

ಉತ್ತಮ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಮೊಹಮ್ಮದ್ ಅಲಿಮುದ್ದಿನ್, ಶಾಹಿದ್ ಹುಸೇನ್, ಸಲಿಂ ಪಾಷಾ, ಸೈಯದ್ ಹಿದಾಯತ್ ಅಲಿ, ಇಲ್ಯಾಯಸ್ ನಾಲಬಂದ್ ಮುಂತಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.