ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್: ಎಐಡಿಎಸ್‌ಒದಿಂದ ಕೋವಿಡ್‌ ಟೆಲಿ ಕ್ಲಿನಿಕ್

Last Updated 14 ಜನವರಿ 2022, 13:30 IST
ಅಕ್ಷರ ಗಾತ್ರ

ಕೊಪ್ಪಳ:ದೇಶವ್ಯಾಪಿ ಓಮೈಕ್ರಾನ್ ಏರಿಕೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಐಡಿಎಸ್‌ಓ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಸೋಂಕಿತರಿಗೆ ಚಿಕಿತ್ಸೆ ನೀಡಲು ಆನ್‌ಲೈನ್ ಮೂಲಕ ‘ಹಲೋ ಡಾಕ್ಟ್ರಸ್' ಉಚಿತ ಕೋವಿಡ್ ಟೆಲಿ ಕ್ಲಿನಿಕ್‌ ಅನ್ನು ಶುಕ್ರವಾರದಿಂದ ಆರಂಭಿಸಲಾಗುತ್ತಿದೆ.

ಕೋವಿಡ್ 2ನೇ ಅಲೆಯ ಸಂದರ್ಭದಲ್ಲೂ ನಮ್ಮ ಸಂಘಟನೆಯು ನಡೆಸಿದ ಉಚಿತ ಕೋವಿಡ್ ಟೆಲಿ ಕ್ಲಿನಿಕ್ ಮೂಲಕ ನೂರಾರು ಸೋಂಕಿತರು ಚಿಕಿತ್ಸೆ ಮತ್ತು ಸಲಹೆ ಪಡೆದು ಗುಣಮುಖರಾದರು. ಈ ಬಾರಿಯೂ ಮನೆಯಲ್ಲಿ ಕ್ವಾರಂಟೈನ್ ಆದ ಕೋವಿಡ್ ರೋಗಿಗಳಿಗೆ ಮತ್ತು ಕೋವಿಡ್ ಪ್ರಾಥಮಿಕ ಹಂತದ ಚಿಕಿತ್ಸೆಗಾಗಿ, ಕೋವಿಡ್ ಲಕ್ಷಣಗಳು ಇರುವವರಿಗೆ ತಜ್ಞ ವೈದ್ಯರ ಜೊತೆ ನೇರ ಉಚಿತ ದೂರವಾಣಿ ಸಮಾಲೋಚನೆ ನಡೆಸುವ ಉದ್ದೇಶದಿಂದ, ಈ ಸೇವೆಯನ್ನು ಆರಂಭಿಸಲಾಗಿದೆ.

ಗ್ರಾಮೀಣ ಪ್ರದೇಶದ, ಹೆಚ್ಚಾಗಿ ಆರೋಗ್ಯ ವ್ಯವಸ್ಥೆ ಇಲ್ಲದ ನಗರಗಳಲ್ಲಿ ವಾಸಿಸುತ್ತಿರುವ ಬಡ ಜನರಿಗೆ ನೆರವು ಒದಗಿಸುವುದು ಮತ್ತು ಕೋವಿಡ್ ಪೀಡಿತರಿಗೆ ಮಾನಸಿಕ ಸ್ಥೈರ್ಯವನ್ನು ತುಂಬುವುದು ನಮ್ಮ ಉದ್ದೇಶ. ರಾಜ್ಯದ ಹಲವಾರು ಪ್ರತಿಷ್ಠಿತ, ನುರಿತ ವೈದ್ಯರು ನಮ್ಮ ಜೊತೆ ಕೈಸೇರಿಸಿರುವುದು ಸರ್ಕಾರಗಳ ವೈಫಲ್ಯಗಳ ನಡುವೆ ಜನ ಸೇವೆಗೆ ಮುಂದೆ ಬಂದಿರುವ ಜೀವಪರ ವ್ಯಕ್ತಿ/ಸಂಘಟನೆಗಳ ದಾರಿಯಲ್ಲಿ ನಮ್ಮ ಸಣ್ಣ ಪ್ರಯತ್ನಕ್ಕೆ ಶಕ್ತಿ ನೀಡಿದೆ.

ಡಿ.14ರಿಂದ ಪ್ರತಿದಿನ ಬೆಳಿಗ್ಗೆ ಮತ್ತುಸಂಜೆ ತಲಾ ಒಂದು ಗಂಟೆಗಳ ಎರಡು ಅವಧಿಗಳಿಗೆ ಅಪಾಯಿಂಟ್‌ಮೆಂಟ್ ನೀಡಲಾಗುವುದು.ಸಂಪರ್ಕಕ್ಕೆಮೊ-9164220387, 9035762866 ಹಾಗೂ 8880744437 ಸಂಪರ್ಕಿಸಬಹುದು.

ಮತ್ತಷ್ಟು ಮಾಹಿತಿ, ತಜ್ಞ ವೈದ್ಯರ ಪಟ್ಟಿ, ನಿರ್ದಿಷ್ಟ ವೇಳಾಪಟ್ಟಿಗಾಗಿ ಎಐಡಿಎಸ್‌ಓ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸಬಹುದು. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಘಟನೆಯ ಜಿಲ್ಲಾ ಸಂಚಾಲಕಗಂಗರಾಜ ಅಳ್ಳಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT