ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ಓಡಿಸಲು ಆಗ್ರಹ

Last Updated 21 ಜೂನ್ 2021, 10:49 IST
ಅಕ್ಷರ ಗಾತ್ರ

ಕನಕಗಿರಿ: ‘ಸರ್ಕಾರ ಲಾಕ್‌ಡೌನ್‌ ಸಡಿಲಗೊಳಿಸಿ ಬಸ್ ಸಂಚಾರಕ್ಕೆ ಅವಕಾಶ ನೀಡಿದರೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯವರು ಸೋಮವಾರ ಕೊಪ್ಪಳದಿಂದ ಕನಕಗಿರಿಗೆ ಬಸ್ ಓಡಿಸಿಲ್ಲ’ ಎಂದು ಪ್ರಯಾಣಿಕರು ದೂರಿದ್ದಾರೆ.

ಕೊಪ್ಪಳದಿಂದ ಪ್ರತಿದಿನ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಹತ್ತಾರು ಶಿಕ್ಷಕರು, ವಿವಿಧ ಇಲಾಖೆಗಳ ನೌಕರರು ಬರುತ್ತಿದ್ದು, ಬಸ್ ಓಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಸಾರಿಗೆ ಅಧಿಕಾರಿಗಳು ಪ್ರಯಾಣಿಕರ ನೆಪದಲ್ಲಿ ಕ್ಯಾರೆ ಎನ್ನದೆ ಬಸ್ ಓಡಿಸಿಲ್ಲ. ಹತ್ತಾರು ಜನ ನೌಕರರು ಹಾಗೂ ಇತರ ಪ್ರಯಾಣಿಕರು ಬೇರೆ ದಾರಿ ಇಲ್ಲದೆ ಟಾಟಾ ಏಸ್ ವಾಹನವನ್ನು ಬಾಡಿಗೆ ಮಾಡಿಕೊಂಡು ಶಾಲೆ, ಕಚೇರಿಗೆ ಬರುವಂತಾಗಿದೆ ಎಂದು ಶಿಕ್ಷಕರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ಕೊಪ್ಪಳದಿಂದ ಕನಕಗಿರಿ, ಕನಕಗಿರಿಯಿಂದ ಕೊಪ್ಪಳಕ್ಕೆ ಹೋಗಲು ಬಸ್ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಯಾಣಿಕರು ಎಚ್ಚರಿಕೆ ನೀಡಿದ್ದಾರೆ.

ಬಸ್ ಓಡಿಸುವಂತೆ ಪ್ರಯಾಣಿಕರು ಮನವಿ ಮಾಡಿಕೊಂಡಿದ್ದರು ಮೇಲಾಧಿಕಾರಿಗಳ ಜತೆಗೆ ಮಾತನಾಡಿದ್ದು, ಮಂಗಳವಾರದಿಂದ ಬಸ್ ಬಿಡಲಾಗುವುದು ಎಂದು ಇಲ್ಲಿನ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಣಾಧಿಕಾರಿ ಶ್ರೀರಾಮ ನಾಯಕ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT