ಶುಕ್ರವಾರ, ಮಾರ್ಚ್ 31, 2023
22 °C

ವೈಕುಂಠ ಏಕಾದಶಿ; ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ವೈಕುಂಠ ಏಕಾದಶಿ ನಿಮಿತ್ತ ಭಕ್ತರು ಇಲ್ಲಿಯ ಪುರಾತನವಾದ ವೆಂಕಟೇಶ್ವರ ದೇವಾಲಯಕ್ಕೆ ಆಗಮಿಸಿ, ಪೂಜೆ ಸಲ್ಲಿಸಿ, ತೀರ್ಥ, ಪ್ರಸಾದ ಸ್ವೀಕರಿಸಿ ಧನ್ಯತಾಭಾವ ಮೆರೆದರು.‌

ಹಿಂದಿನ ದಿನದಿಂದಲೇ ಪುರಸಭೆ, ಕಂದಾಯ ಇಲಾಖೆ ಸಿಬ್ಬಂದಿ ದೇವಾಲಯವನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಜ್‌ ಮಾಡಿ, ಒಳ ಹೋಗುವ, ಹೊರ ಬರುವ ದಾರಿಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಕೊರೋನಾ ಷರತ್ತನ್ನು ಕಡ್ಡಾಯವಾಗಿ ಪಾಲಿಸಿ, ಹೆಚ್ಚು ಭಕ್ತರು ಸೇರದಂತೆ ನಿಗಾ ವಹಿಸಿದ್ದರು.

ಅರ್ಚಕ ಭೋಗೇಶಾಚಾರ್ಯ ಇನಾಮದಾರ ನೇತೃತ್ವದಲ್ಲಿ ವಿಶೇಷ ಪೂಜೆ, ಅಲಂಕಾರ, ಪಂಚಾಮೃತಾಭಿಷೇಕ, ಅರ್ಚನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಾಲಯದ ಒಳಗೆ, ಹೊರಗೆ ಬಾಳೆಗಿಡ, ತೆಂಗಿನ ಗರಿ, ಹೂವುಗಳಿಂದ ಅಲಂಕಾರಿಸಲಾಗಿತ್ತು.

ಅರ್ಚಕ ಭೋಗೇಶಾರ್ಯ ಮಾತನಾಡಿ, ವರ್ಷದಲ್ಲೇ ಅತ್ಯತ ಪವಿತ್ರ ದಿನವೇ ವೈಕುಂಠ ಏಕಾದಶಿ, ವೆಂಕಟೇಶ್ವರ ದರ್ಶನ, ಉಪವಾಸ ಮಾಡುವುದು ಇನ್ನೂ ಶ್ರೇಷ್ಠ. ಇದರ ಮಹತ್ವದಿಂದಲೇ ಭಕ್ತರು ಆಗಮಿಸಿ ದರ್ಶನ ಪಡೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.