ಶನಿವಾರ, ಮೇ 28, 2022
25 °C

ಕೊಪ್ಪಳದಲ್ಲಿ ಪಂಚಮಸಾಲಿ ಮಹಿಳಾ ಪೀಠಕ್ಕೆ ಚಿಂತನೆ: ಕಿಶೋರಿ ಬೂದನೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಪಂಚಮಸಾಲಿ ರಾಜ್ಯದಲ್ಲಿಯೇ ದೊಡ್ಡ ಸಮುದಾಯವಾಗಿದ್ದು, ಈಗಿರುವ ಪೀಠಗಳಿಂದ ಮಹಿಳೆಯರ ಅಭಿವೃದ್ಧಿಗೆ ರಚನಾತ್ಮಕ ಕೆಲಸವಾಗಿಲ್ಲ. ಆದ್ದರಿಂದ ಕೊಪ್ಪಳದಲ್ಲಿ ಪಂಚಮಸಾಲಿ ಮಹಿಳಾ ಪೀಠ ಸ್ಥಾಪಿಸುವ ಚಿಂತನೆ ನಡೆದಿದೆ’ ಎಂದು ಪಂಚಮಸಾಲಿ ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷೆ ಕಿಶೋರಿ ಬೂದನೂರ ತಿಳಿಸಿದರು.

ಅವರು ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ‘ಅಂದಾಜು 40 ಲಕ್ಷ ಮಹಿಳೆಯರನ್ನು ಹೊಂದಿದ ಪಂಚಮಸಾಲಿ ಸಮಾಜಕ್ಕೆ ಪ್ರತ್ಯೇಕ ಮಹಿಳಾ ಪೀಠ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಸಮಾಜದಲ್ಲಿ 11 ಸಾಧಕ ಮಹಿಳೆಯರು ಇದ್ದಾರೆ. ಅವರಲ್ಲಿ ಒಬ್ಬರನ್ನು ಪೀಠಾಧಿಕಾರಿಯನ್ನಾಗಿ ಮಾಡಬೇಕು ಎಂಬ ಯೋಚನೆ ಇದೆ’ ಎಂದರು.

‘ಮಹಿಳಾ ಪೀಠ ಸ್ಥಾಪನೆ ಬಗ್ಗೆ ಈಗಾಗಲೇ ಒಂದು ಸಭೆ ನಡೆಸಲಾಗಿದೆ. ಈ ಪೀಠ ಯಾರ ವಿರುದ್ಧವೂ ಅಲ್ಲ. ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುವ ಉದ್ದೇಶ ಹೊಂದಿದೆ. ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು‘ ಎಂದು ಅವರು ತಿಳಿಸಿದರು.

‘ಹೆಸರಿಗೆ ಮಾತ್ರ ಕಿತ್ತೂರು ಚನ್ನಮ್ಮ ಅನ್ನುತ್ತಾರೆ. ಆದರೆ, ಸಮಾಜದ ಮಹಿಳೆಯರಿಗೆ ಅಷ್ಟೊಂದು ಆದ್ಯತೆ ನೀಡಿಲ್ಲ‘ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು