ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಲಕ್ಷಾಂತರ ಜನರ ನಡುವೆ ಗವಿಮಠದ ಮಹಾರಥೋತ್ಸವದ ವೇಳೆ ಪಲ್ಲಕ್ಕಿ ಹೊತ್ತು ಭಕ್ತಿ ಸಮರ್ಪಿಸಿದರು.

ಈ ವೇಳೆ ಮಾತನಾಡಿ ‘ಗವಿಸಿದ್ದೇಶ್ವರ ಜಾತ್ರೆಗೆ ಬರಬೇಕು ಎನ್ನುವ ಅಪೇಕ್ಷೆಯಿತ್ತು. ಅದು ಈಗ ಈಡೇರಿದೆ. ಜಗತ್ತಿನ ಯಾವುದೇ ಪವಿತ್ರ ಸ್ಥಳದಲ್ಲಿ ಇಂತಹ ದೃಶ್ಯ ನೋಡಲು ಸಾಧ್ಯವಿಲ್ಲ. ಜಾತ್ರೆಯಲ್ಲಿ ಪಾಲ್ಗೊಂಡಿದ್ದು ಸೌಭಾಗ್ಯ’ ಎಂದರು.

‘ಪ್ರಯಾಗದಲ್ಲಿ ಕುಂಭಮೇಳ ನಡೆಯುತ್ತಿದೆ. ಇಲ್ಲಿಯೂ ಕುಂಭಮೇಳದ ರೀತಿಯಲ್ಲಿಯೇ ಜಾತ್ರೆ ನಡೆಯುತ್ತಿದೆ. ಇಲ್ಲಿನ ಜಾತ್ರೆ ಆಡಂಬರಕ್ಕೆ ಸೀಮಿತವಾಗದೆ ಜನಕಲ್ಯಾಣ ಕೆಲಸಕ್ಕೆ ಪ್ರೇರಣೆಯಾಗುತ್ತಿದೆ. ಭವಿಷ್ಯದಲ್ಲಿ ಕಿವುಡ ಹಾಗೂ ಮೂಕ ಮಕ್ಕಳಿಗೆ ಶಾಲೆ ಆರಂಭಿಸಬೇಕು ಎನ್ನುವುದು ಸ್ವಾಮೀಜಿಯ ಆಶಯವಾಗಿದೆ. ಅದು ಈಡೇರಲಿ’ ಎಂದರು.
.ವಿಡಿಯೊ: ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಈ ಬಾರಿ ಸಾವಯವ ಜಿಲೇಬಿ ಘಮ!.ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ 10 ಸಾವಿರ ರೊಟ್ಟಿ ರವಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.