ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರು ಬಳಕೆದಾರರ ಸಹಕಾರ ಸಂಘ: ಬಿ. ಸತ್ಯನಾರಾಯಣ ಅಧ್ಯಕ್ಷ

Published 10 ಜುಲೈ 2024, 5:35 IST
Last Updated 10 ಜುಲೈ 2024, 5:35 IST
ಅಕ್ಷರ ಗಾತ್ರ

ಕಾರಟಗಿ: ತಾಲ್ಲೂಕಿನ ಯರಡೋಣಾ-2 ನೀರು ಬಳಕೆದಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಿ. ಸತ್ಯನಾರಾಯಣ ವೀರರಾಜು, ಉಪಾಧ್ಯಕ್ಷರಾಗಿ ಹನುಮಂತಪ್ಪ ನಾಯಕ ಮಂಗಳವಾರ ಅವಿರೋಧ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಚನ್ನಬಸಪ್ಪ ಕರಮುಡಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನೀರು ಬಳಕೆದಾರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವೈ ನಾಗೇಶ್, ನಿರ್ದೇಶಕ ಎಸ್. ಸಾಮೇಲು, ಎನ್. ಬಾಪಿರಾಜು, ವಿ. ಸತ್ಯನಾರಾಯಣ, ಸೋಮಪ್ಪ, ಶರಣಯ್ಯ, ಪಿ. ಗಣಪತಿ, ಯು.ಬಾಲಪ್ಪ, ಬಿ. ಶರಣಪ್ಪ, ಪಿ. ಶಿರೋಮಣಿ, ವೆಂಕಟರಮಣಮ್ಮ, ಮಾಜಿ ಕಾರ್ಯದರ್ಶಿ ವಂಕ ವೀರರಾಜು, ಯರಮಾಟಿ ರಾಜು, ಪಿ. ಶ್ರೀನಿವಾಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT