ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದೌರ್ಬಲ್ಯವೇ ಚಟಕ್ಕೆ ಕಾರಣ: ಬ್ರಹ್ಮಕುಮಾರಿ ಯೋಗಿನಿ

Published 2 ಜೂನ್ 2024, 14:13 IST
Last Updated 2 ಜೂನ್ 2024, 14:13 IST
ಅಕ್ಷರ ಗಾತ್ರ

ಕೊಪ್ಪಳ: ‘ಮನುಷ್ಯನಲ್ಲಿ ಮಾನಸಿಕ ಹಾಗೂ ಅಧ್ಯಾತ್ಮಿಕ ಬಲ ಕಡಿಮೆಯಾಗಿರುವುದೇ ತಂಬಾಕಿಗೆ ಬಲಿಯಾಗಲು ಮುಖ್ಯ ಕಾರಣ’ ಎಂದು ಬ್ರಹ್ಮಕುಮಾರಿ ಯೋಗಿನಿ ಹೇಳಿದರು.

ಈಶ್ವರೀಯ ವಿಶ್ವವಿದ್ಯಾಲಯ ತನ್ನ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಂಬಾಕು ನಿಷೇಧ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಬುದ್ಧಿಜೀವಿಯಾದ ಮನುಷ್ಯನಿಗೆ ಒಳ್ಳೆಯದನ್ನು ಸ್ವೀಕಾರ ಮಾಡಲು ಆಗುತ್ತಿಲ್ಲ, ಕೆಟ್ಟದ್ದನ್ನು ಬಿಡಲೂ ಸಾಧ್ಯವಾಗುತ್ತಿಲ್ಲ. ಅನೇಕ ದುಶ್ಚಟಗಳಿಗೆ ದಾಸನಾಗುತ್ತಿದ್ದು, ದಿನೇ ದಿನೇ ಮನುಷ್ಯನಲ್ಲಿ ದುಃಖ ಹಾಗೂ ಅಶಾಂತಿ ಹೆಚ್ಚುತ್ತಿದೆ. ಇಂತಹ ಸ್ಥಿತಿಗೆ ಮೂಲ ಕಾರಣ ಮನುಷ್ಯನ ಮನೋಬಲ ಕಡಿಮೆಯಾಗಿರುವುದು’ ಎಂದರು.

‘ಮನುಷ್ಯ ತನ್ನ ಮೇಲೆ ತನಗೆ ನಿಯಂತ್ರಣ ಶಕ್ತಿ ಕಳೆದುಕೊಳ್ಳುತ್ತಿದ್ದಾನೆ. ಆದ್ದರಿಂದ ವರ್ತಮಾನ ಸಮಯದಲ್ಲಿ ಇಂದಿನ ಮನುಕುಲವನ್ನು ದುಶ್ಚಟಗಳಿಂದ ದೂರ ಮಾಡಲು ವ್ಯಕ್ತಿ ದುಶ್ಚಟಗಳಿಗೆ ವಶವಾಗದಂತೆ ಮಾಡಲು ವ್ಯಕ್ತಿಯಲ್ಲಿ ದೃಢತೆಯ ಶಕ್ತಿ ಆತ್ಮವಿಶ್ವಾಸವನ್ನು ಮೂಡಿಸುವ ಉದ್ದೇಶದಿಂದಲೇ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದು ಹೇಳಿದರು.

‘ಮನೋಬಲ ವೃದ್ಧಿಗಾಗಿ ರಾಜಯೋಗ ಶಿಬಿರವನ್ನು ಈಶ್ವರೀಯ ವಿಶ್ವವಿದ್ಯಾಲಯ ಉಚಿತವಾಗಿ ಏರ್ಪಡಿಸಿದ್ದು, ಬೆಳಿಗ್ಗೆ ಮತ್ತು ಸಂಜೆ 6 ಗಂಟೆಯಿಂದ 7ರ ತನಕ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿಬಿರ ನಡೆಯಲಿದೆ’ ಎಂದು ಮಾಹಿತಿ ನೀಡಿದರು. ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT