ಶುಕ್ರವಾರ, ಜೂನ್ 18, 2021
24 °C

ಕರಡಿ ದಾಳಿ: ಮೂವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ನಗರದ ಕೊಟ್ಟೂರೇಶ್ವರ ಕ್ಯಾಂಪ್‌ನಲ್ಲಿ ಕರಡಿಯೊಂದು ಜನರ ಮೇಲೆ ದಾಳಿ ಮಾಡಿದ್ದು, ಮೂವರು ಗಾಯಗೊಂಡಿದ್ದಾರೆ.

ಕೊಟ್ಟೂರೇಶ್ವರ ಕ್ಯಾಂಪ್‌ನ ಬಳಿಗಾರ ಓಣಿಯ ಈಶ್ವರಮ್ಮ, ನಂದಾಬಾಯಿ ಹಾಗೂ ನಗರಸಭೆ ಪೌರಕಾರ್ಮಿಕ ಕಾಸೀಂಸಾಬ್ ಗಾಯಗೊಂಡವರು.

ಅವರನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಮಾತನಾಡಿ,‘ಇದೇ ಮೊದಲ ಬಾರಿಗೆ ಕರಡಿ ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವವರ ಮೇಲೆ ದಾಳಿ ಮಾಡಿದೆ. ಗುಡ್ಡಗಾಡು ಪ್ರದೇಶದಿಂದ ಅದು ನಗರಕ್ಕೆ ಬಂದಿರಬಹುದು ಎನ್ನುವ ಮಾಹಿತಿ ಇದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗಿ ನಗರದಲ್ಲಿ ವನ್ಯ ಜೀವಿಗಳು ಕಾಣಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಕರಡಿ ಕಾಣಿಸಿಕೊಂಡಿರುವ ಕುರಿತು ಅಧಿಕಾರಿಗಳು ಎಚ್ಚೆತ್ತುಕೊಂಡು ಬೋನ್ ಅಳವಡಿಕೆ ಮಾಡಬೇಕು’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.