ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ಕವಿತಾ

Last Updated 8 ಮಾರ್ಚ್ 2020, 9:56 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಶ್ರಿ ಎಂ.ಎನ್‌.ಎಂ. ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಣಿತ ಮತ್ತು ವಿಜ್ಞಾನ ಶಿಕ್ಷಕಿ ಕವಿತಾ ದಿಗ್ಗಾವಿ, ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿರುವ ವಿಜ್ಞಾನ ಮತ್ತು ಗಣಿತವನ್ನು ತಮ್ಮ ಸರಳ ಶೈಲಿಯ ಮೂಲಕ ಅರ್ಥ ಮಾಡಿಸಿ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕಿಯಾಗಿದ್ದಾರೆ.

ಶಾಲೆಯ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇವರು, ವಿಕೇಂಡ್‌ ಹಾಗೂ ರಜಾ ದಿನಗಳು ಬಂದರೆ ಕಾಲಹರಣ ಮಾಡಲ್ಲ. ಓದಿನಲ್ಲಿ ಹಿಂದುಳಿದ ಮಕ್ಕಳ ಮನೆಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಓದಿನತ್ತ ಪ್ರೇರೇಪಿಸುವ ಕೆಲಸ ಮಾಡುತ್ತಾರೆ.ಜೊತೆಗೆ ಬಡಮಕ್ಕಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ.

ಇನ್ನು, ಹತ್ತನೇ ತರಗತಿ ಮಕ್ಕಳ ಮೇಲೆ ಕಾಳಜಿ ಹೊಂದಿರುವ ಇವರು, ಪರೀಕ್ಷೆ ಸಮಯದಲ್ಲಿ ಯಾವ ರೀತಿ ಮಕ್ಕಳು ತಯಾರಿ ನಡೆಸಬೇಕು. ಕಠಿಣ ವಿಷಯಗಳ ಅಧ್ಯಯನ ಹೇಗಿರಬೇಕು ಎಂಬುದರ ಬಗ್ಗೆ ಸ್ವತಃ ಟೈಮ್‌ ಟೇಬಲ್‌ ಅನ್ನು ಸೆಟ್‌ ಮಾಡಿಕೊಡುತ್ತಾರೆ. ಜೊತೆಗೆ ಶಾಲೆಯ ಫಲಿತಾಂಶ ಸುಧಾರಣೆಗಾಗಿ ಮಕ್ಕಳು ಮುಂಜಾನೆ ಬೇಗ ಎದ್ದು, ಓದಿಕೊಳ್ಳುವಂತೆ ಪ್ರೇರೆಪಿಸಲು ಅವರ ಪೋಷಕರ ಮೊಬೈಲ್‌ ನಂಬರ್‌ ಗಳಿಗೆ ಮಿಸ್ಡ್‌ ಕಾಲ್‌ ಮಾಡುವ ಮೂಲಕ ಅವರನ್ನು ಪ್ರತಿನಿತ್ಯ ಎದ್ದೇಳಿಸುವ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕ ವಿಜ್ಞಾನ ಪರಿಷತ್‌ ನೀಡುವ ಉತ್ತಮ ವಿಜ್ಞಾನ ಶಿಕ್ಷಕಿ ಪ್ರಶಸ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಕೊಪ್ಪಳ ನೀಡುವ ಜಿಲ್ಲಾ ಹಾಗೂ ತಾಲ್ಲೂಕು ಉತ್ತಮ ಶಿಕ್ಷಕಿ ಪ್ರಶಸ್ತಿಯ ಜೊತೆಗೆ ಕಳೆದ ವರ್ಷ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT