ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ ಸ್ಪರ್ಧೆ: ಕಾಮೇಶ್ ಪಾಟೀಲ ‘ಕನಕಗಿರಿ ಕೇಸರಿ’

Published 29 ಫೆಬ್ರುವರಿ 2024, 4:57 IST
Last Updated 29 ಫೆಬ್ರುವರಿ 2024, 4:57 IST
ಅಕ್ಷರ ಗಾತ್ರ

ಕನಕಗಿರಿ: ಎರಡು ದಿನಗಳು ಕಳೆದರೆ ಸಾಕು ಕನಕಗಿರಿಯಲ್ಲಿ ಉತ್ಸವದ ಸಂಭ್ರಮ. ಅದಕ್ಕೂ ಮೊದಲು ಸಡಗರ ಮನೆ ಮಾಡಿದ್ದು ಬುಧವಾರ ಆರಂಭವಾದ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯ ರೋಚಕತೆ ಕ್ರೀಡಾಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು.

ಈ ಜಿದ್ದಾಜಿದ್ದಿಯ ಹೋರಾಟದಲ್ಲಿ ಬೆಳಗಾವಿಯ ಕಾಮೇಶ್ ಪಾಟೀಲ 74 ಕೆ.ಜಿ. ಮೇಲಿನ ವಿಭಾಗದಲ್ಲಿ ‘ಕನಕಗಿರಿ ಕೇಸರಿ’ ಮತ್ತು ಹಳಿಯಾಳದ ಶಾಲಿನಿ ಸಿದ್ದಿ 65 ಕೆ.ಜಿ. ಮೇಲಿನವರ ವಿಭಾಗದಲ್ಲಿ ‘ಕನಕಗಿರಿ ಮಹಿಳಾ ಕೇಸರಿ’ ಗೌರವ ಪಡೆದರು. ಹಳಿಯಾಳದ ಪ್ರಿನ್ಸಿಟಾ ಸಿದ್ಧಿ ದ್ವಿತೀಯ ಸ್ಥಾನ ಗಳಿಸಿದರು.

ಹಳಿಯಾಳದ ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿರುವ ಶಾಲಿನಿ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಕುಸ್ತಿಯಲ್ಲಿ ಹಳಿಯಾದ ಪೈಲ್ವಾನರೇ ಪ್ರಾಬಲ್ಯ ಮೆರೆದಿದ್ದು ವಿಶೇಷ. ‘ಕನಕಗಿರಿ ಕೇಸರಿ’ ಬೆಳ್ಳಿಯ ಗಧೆ, ₹15 ಸಾವಿರ ನಗದು ಮತ್ತು ಪದಕ ಒಳಗೊಂಡಿದೆ.  74 ಕೆ.ಜಿ. ಮೇಲಿನವರ ಪುರುಷರ ವಿಭಾಗದಲ್ಲಿ ಹಳಿಯಾಳದ ಮಂಜುನಾಥ ಗೌಡಪ್ಪನವರ ಎರಡನೇ ಸ್ಥಾನ ಗಳಿಸಿದರು.

51 ಕೆ.ಜಿ. ವಿಭಾಗದಲ್ಲಿ ಹಳಿಯಾಳದ ಕಾವ್ಯಾ ದಾನ್ವೇನವರ ಪ್ರಥಮ, ಬೆಳಗಾವಿ ಕ್ರೀಡಾ ವಸತಿ ನಿಲಯದ ಭಾಗ್ಯಶ್ರೀ ಗ್ಯಾನನೇನವರ ದ್ವಿತೀಯ, 55 ಕೆ.ಜಿ.ಯಲ್ಲಿ ಹಳಿಯಾಳದ ಶ್ವೇತಾ ಎಸ್‌. ಅಣ್ಣಿಕೇರಿ ‘ಕನಕಗಿರಿ ಕಿಶೋರಿ‘, ಹಳಿಯಾಳದ ಸವಿತಾ ಸಿದ್ದಿ ದ್ವಿತೀಯ, 59ರಿಂದ 65 ಕೆ.ಜಿ. ವಿಭಾಗದಲ್ಲಿ ಲಕ್ಷ್ಮಿ ಪಾಟೀಲ ಪ್ರಥಮ, ಗಾಯತ್ರಿ ಆರ್‌. ಸುತಾರ ದ್ವಿತೀಯ ಸ್ಥಾನ ಪಡೆದರು. ಈ ವಿಭಾಗದಲ್ಲಿ ಒಟ್ಟು 58 ಜನ ಪಾಲ್ಗೊಂಡಿದ್ದರು.

ಪುರುಷರ ಸ್ಪರ್ಧೆಯ 74 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಯೋಗೇಶ ‘ಕನಕಗಿರಿ ಕುಮಾರ‘ ಪ್ರಥಮ, ಬಾಗಲಕೋಟೆಯ ಅಲ್ತಾಫ್ ಕರ್ಜಗಿ ದ್ವಿತೀಯ, 61 ಕೆ.ಜಿ. ವಿಭಾಗದಲ್ಲಿ ಹಳಿಯಾಳದ ರೋಹನ್‌ ದೊಡ್ಡಮನಿ ‘ಕನಕಗಿರಿ ಕಿಶೋರ’, ಮಾಳಪ್ಪ ಹಾತರಕಿ ದ್ವಿತೀಯ ಸ್ಥಾನ ಪಡೆದರು.

57 ಕೆ.ಜಿ. ವಿಭಾಗದಲ್ಲಿ ಬಾಗಲಕೋಟೆಯ ಮಂಜುನಾಥ ದೇಸಾಯಿ ಪ್ರಥಮ, ಹಳಿಯಾಳದ ಜ್ಞನೇಶ್ವರ ಹಳದೂಳಕರ ದ್ವಿತೀಯ, 70 ಕೆ.ಜಿ. ವಿಭಾಗದಲ್ಲಿ ಜ್ಯೋತಿ ಬಾ ಜಾಂಬ್ರೆ ಪ್ರಥಮ, ಶಿವಂ ಪಾಟೀಲ ದ್ವಿತೀಯ, 74 ಕೆ.ಜಿ. ಮೇಲಿನವರ ವಿಭಾಗದಲ್ಲಿ ರಮೇಶ ಪಾಟೀಲ ಪ್ರಥಮ, ಮಂಜುನಾಥ ಗದಿಯಪ್ಪನವರ ದ್ವಿತೀಯ ಸ್ಥಾನ ಗಳಿಸಿದರು. ಈ ವಿಭಾಗದಲ್ಲಿ 80 ಜನ ಪೈಲ್ವಾನರು ಭಾಗವಹಿಸಿದ್ದರು.

ಚಾಲನೆ: ಉಪ ವಿಭಾಗಾಧಿಕಾರಿ ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ ಆಂಜನೇಯನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ, ತಹಶೀಲ್ದಾರ್ ವಿಶ್ವನಾಥ ಮುರುಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಚಿದಾನಂದ ಕುರಿ, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ಚಂದ್ರಶೇಖರ ಕಂದಕೂರು, ಉತ್ಸವದ ಕ್ರೀಡಾ ಸಮಿತಿ ಅಧ್ಯಕ್ಷ ವಿಠ್ಠಲ ಜಾಬಗೌಡರ, ಪಿಐ ಎಂ.ಡಿ.ಫೈಜುಲ್ಲಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಮಗಂಡಿ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ಶರಣಬಸಪ್ಪ ಭತ್ತದ, ಪಟ್ಟಣ ಪಂಚಾಯಿತಿ ಸದಸ್ಯರಾದ ಅನಿಲಕುಮಾರ ಬಿಜ್ಜಳ, ರಾಜಸಾಬ ನಂದಾಪುರ, ಶರಣೆಗೌಡ ಪಾಟೀಲ, ಸಿದ್ದಾರ್ಥ ಕಲ್ಲಬಾಗಿಲಮಠ, ರಾಕೇಶ ಕಂಪ್ಲಿ ಪಾಲ್ಗೊಂಡಿದ್ದರು.

ಪುರುಷರ, ಮಹಿಳಾ ವಿಭಾಗದ ಹ್ಯಾಂಡ್‌ಬಾಲ್‌ನಲ್ಲಿ ವಿದ್ಯಾನಗರ ಚಾಂಪಿಯನ್ಸ್‌ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದ ಎಸ್‌.ಪಿ. ಯಶೋಧಾ ಸ್ಮಾರಕಗಳ ರಕ್ಷಣೆ ಮಾಡುವಂತೆ ಮನವಿ
ಮೂರು ದಿನ ಕ್ರೀಡೆಗಳು ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ರುದ್ರಸ್ವಾಮಿ ಶಾಲಾ ಮೈದಾನದಲ್ಲಿ ನಡೆಯಲಿವೆ. ದೇಶಿ ಕ್ರೀಡೆಗಳಿಗೆ ಆದ್ಯತೆ ನೀಡಲಾಗಿದೆ.
ಕ್ಯಾಪ್ಟನ್‌ ಮಹೇಶ ಮಾಲಗಿತ್ತಿ ಎಸಿ ಕೊಪ್ಪಳ
ಆರೋಗ್ಯ ವೃದ್ದಿಗೆ ಕ್ರೀಡೆ ಸಹಕಾರಿಯಾಗಿವೆ ಕ್ರೀಡಾಕೂಟ ತಯಾರಿ ಒಂದೆರಡು ದಿನ ಮಾತ್ರಕ್ಕೆ ಸೀಮಿತಗೊಳಿಸದೆ ನಿರಂತರವಾಗಿ ನಡೆಸಬೇಕು.
ರಾಹುಲ್ ರತ್ನಂ ಪಾಂಡೆಯೆ ಜಿಲ್ಲಾ ಪಂಚಾಯಿತಿ ಸಿಇಒ ಕೊಪ್ಪಳ
ಹೊನಲು ಬೆಳಕಿನಲ್ಲಿ ವಾಲಿಬಾಲ್‌
ಕನಕಗಿರಿ: ‘ಕ್ರೀಡಾಕೂಟದಲ್ಲಿ ಗೆಲುವು ಸೋಲು ಸಹಜವಾಗಿದ್ದು ಪ್ರತಿಯೊಬ್ಬರು ಕ್ರೀಡಾ ನಿಯಮಗಳಿಗೆ ಬದ್ದರಾಗಿರಬೇಕು’ ಎಂದು ಜಿಲ್ಲಾಧಿಕಾರಿ ನಳಿನ್ ಆತುಲ್ ಹೇಳಿದರು. ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ  ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಕ್ರೀಡಾಕೂಟ ನಡೆದವು. ಬುಧವಾರ ನಡೆದ ಹೊನಲು ಬೆಳಕಿನ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ’ಉತ್ಸವ ಆಚರಣೆಯು ಹೆಮ್ಮೆಯ ವಿಷಯವಾಗಿದೆ. ಇದರ ಅಂಗವಾಗಿ ಕ್ರೀಡಾ ಚಟುವಟಿಕೆ ನಡೆಸಲಾಗುತ್ತಿದೆ’ ಎಂದರು.  ಅರ್ಜುನ ಪ್ರಶಸ್ತಿ ಪುರಸ್ಕೃತ ಸೆಬಾಸ್ಟಿಯನ್‌ ಕ್ಸೇವಿಯರ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT