ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಒತ್ತಡದ ಬದುಕಿಗೆ ಯೋಗ ಅಗತ್ಯ’

Published : 14 ಫೆಬ್ರುವರಿ 2024, 15:57 IST
Last Updated : 14 ಫೆಬ್ರುವರಿ 2024, 15:57 IST
ಫಾಲೋ ಮಾಡಿ
Comments

ಕೊಪ್ಪಳ: ‘ಇಂದಿನ ಒತ್ತಡದ ಬದುಕಿನಲ್ಲಿ ಅಧ್ಯಾತ್ಮ ಮತ್ತು ಧ್ಯಾನ ಎರಡೂ ಅಗತ್ಯವಿದ್ದು, ಸಕಾರಾತ್ಮಕ ವಿಚಾರಗಳನ್ನು ರೂಪಿಸಿಕೊಂಡಾಗ ಮಾತ್ರ ಆರೋಗ್ಯದಿಂದ ಮತ್ತು ಸಂತೋಷದಿಂದ ಬದುಕಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಎಸ್. ವಂಟಗೋಡಿ ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಇತ್ತೀಚೆಗೆ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಮಾನಸಿಕ ಒತ್ತಡ ನಿರ್ವಹಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವರು ‘ಮನಸ್ಸಿನ ಒತ್ತಡದಿಂದಲೇ ಅನೇಕ ಶಾರೀರಿಕ ರೋಗಗಳು ಹೆಚ್ಚಾಗುತ್ತಿವೆ. ಧ್ಯಾನದ ಸಾಧನದಿಂದ ಮಾನಸಿಕ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬ್ರಹ್ಮಕುಮಾರಿ ಯೋಗಿನಿ ಮಾನಸಿಕ ಒತ್ತಡಕ್ಕೆ ಕಾರಣಗಳು, ದುಷ್ಪರಿಣಾಮಗಳನ್ನು ಮತ್ತು ಒತ್ತಡದಿಂದ ಮುಕ್ತರಾಗಲು ನಿವಾರಣಾ ಕ್ರಮಗಳ ಬಗ್ಗೆ ಧ್ಯಾನ ಮಾಡುವ ಕ್ರಮಗಳನ್ನು ಹೇಳಿಕೊಟ್ಟರು.

‘ನಾವು ಶರೀರದ ಆರೋಗ್ಯಕ್ಕೆ ಗಮನ ಕೊಡುವುದರ ಜೊತೆಗೆ ಮನಸ್ಸಿನ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಇದಕ್ಕಾಗಿ ಪ್ರತ್ಯೇಕ ಸಮಯ ಮೀಸಲಿಡಬೇಕು. ಪ್ರತಿನಿತ್ಯ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬೆಳಿಗ್ಗೆ 6ರಿಂದ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಜ್ಞಾನ ತರಗತಿಗಳು ನಡೆಯುತ್ತಿವೆ. ಇದರ ಅನುಕೂಲ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಡಿವೈಎಸ್‌ಪಿಗಳಾದ ಮುತ್ತಣ್ಣ ಸವರಗೋಳ ಹಾಗೂ ಸಿದ್ದಲಿಂಗಪ್ಪ ಗೌಡ ಪಾಟೀಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT