ಹನುಮಸಾಗರ: ಹತ್ತು ತಿಂಗಳಿಂದ ಸಮೀಪದ ಜಹಗೀರಗುಡದೂರ ಸರ್ಕಾರಿ ಪ್ರೌಢಶಾಲೆ ಯಲ್ಲಿ ಬೆಂಗಳೂರಿನ ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ ಹಾಗೂ ಗೋಥೆ ಇನ್‌ಸ್ಟಿಟ್ಯೂಟ್ ಮ್ಯಾಕ್ಸ್ ಮುಲ್ಲರ ಭವನ ಹಾಗೂ ಸರ್ವಶಿಕ್ಷಣ ಅಭಿಯಾನ ಯೋಜನೆ ಯಡಿ ‘ಮಕ್ಕಳ ಹೆಜ್ಜೆಗಳು ಜಾನಪದದತ್ತ’ ಎಂಬ ವಿಶೇಷ ತರಬೇತಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯುತ್ತಿದೆ.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಆಯ್ಕೆಮಾಡಿ ಪಠ್ಯದೊಂದಿಗೆ ಜನಪದ ಕಲೆಗಳಾದ ಹಂತಿಪದ, ಸೋಬಾನೆಪದ, ಬೀಸುವ ಕಲ್ಲಿನ ಪದ, ಕುಟ್ಟೋಪದ, ರಿವಾಯತ್ ಹಾಗೂ ಮೊಹರಂ ಅಲಾವಿ ಕುಣಿತವನ್ನು ಮಕ್ಕಳಿಗೆ ಕಲಿಸುವುದು ಈ ಕಾರ್ಯಕ್ರಮದ ಉದ್ದೇಶ. ಕಲಿತ ಮಕ್ಕಳನ್ನು ರಂಗಕ್ಕೆ ತರುವ ಕಾರ್ಯವನ್ನು ಈ ಸಂಸ್ಥೆಗಳು ಕೈಗೊಂಡಿವೆ.

ಮಕ್ಕಳು ಹುಟ್ಟಿನಿಂದಲೇ ಕಲಾವಿದರು. ಬಾಲ್ಯ ದಲ್ಲಿ ಅಪ್ಪ, ಅಮ್ಮ, ಮಾವ, ಕಾಕಾ, ಬೀದಿಯಲ್ಲಿ ತರಕಾರಿ ಮಾರಾಟಗಾರ, ಗೆಳೆಯ, ಗೆಳತಿ ಎಲ್ಲರನ್ನೂ ಅನುಕರಿಸಿ ಆಟವಾಡುತ್ತಾರೆ. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಇವುಗಳನ್ನೇ ಮೂಲವಾಗಿರಿಸಿ ಕೊಂಡು ವಿದ್ಯಾರ್ಥಿಗಳಿಗೆ ರಂಗಮಾಹಿತಿ ನೀಡುವುದು ಕಾರ್ಯಕ್ರಮ ಇದಾಗಿದೆ.

‘ಮಕ್ಕಳು ಚಿಕ್ಕವರಿದ್ದಾಗ ಯಾವುದೇ ಸಾಮಗ್ರಿ ಇಲ್ಲದೆ ಕಲ್ಲು– ಮಣ್ಣಿನಲ್ಲಿ ವಸ್ತುಗಳನ್ನು ಸೃಷ್ಟಿ ಮಾಡುತ್ತಾರೆ. ಮಕ್ಕಳೇ ಪಾತ್ರಧಾರಿಗಳಾಗಿ ಇತರ ಗೆಳೆಯರನ್ನು ಸೇರಿಸಿಕೊಂಡು ನೀನು ಹೀಗೆ ಮಾಡು ಹೀಗೆ ಮಾಡುವೆ ಎಂದು ಹೇಳುತ್ತಲೇ ಅವರೊಳಗೊಬ್ಬ ಕಲಾವಿದ, ನಿರ್ದೇಶಕ, ವಿನ್ಯಾಸಗಾರ ಹುಟ್ಟಿಕೊಳ್ಳುತ್ತಾನೆ. ಇದಕ್ಕೆ ಯಾರೊಬ್ಬರ ನೆರವು ಇರುವುದಿಲ್ಲ.

ಆ ಕಲೆಗೆ ಮತ್ತಷ್ಟು ಪ್ರೋತ್ಸಾಹ ನೀಡುವುದು ನಮ್ಮ ಕೆಲಸ’ ಎಂದು ತರಬೇತಿ ನೀಡಿರುವ ರಂಗತಜ್ಞ ನಿಂಗೂ ಸೊಲಗಿ ಹೇಳಿದರು.
‘ಮಕ್ಕಳು ಬೆಳೆದಂತೆ ಶಿಕ್ಷಣ ಮುಖ್ಯವಾಗಿ, ರಂಗ ಚಟುವಟಿಕೆಯಿಂದ ದೂರ ಸರಿಯುವ ವಾತಾವರಣ ಬೆಳೆಯುತ್ತಿದೆ. ಜನಪದದಲ್ಲಿ ವಯೋ ಭೇದ, ಲಿಂಗಭೇದ ಇಲ್ಲದೆ ಏಕತೆ ನೀಡಿರುವಂಥದ್ದಾಗಿದೆ. ಎಲ್ಲರೂ ಅನುಕರಣೆ ಮೂಲಕ ಕಲಿಯುತ್ತಾರೆ’ ಎಂದು ಸಂಪನ್ಮೂಲ ವ್ಯಕ್ತಿ ಆನಂದಪ್ಪ ಕುರಿ ಹೇಳುತ್ತಾರೆ.

‘ಮಕ್ಕಳು ಇಲ್ಲಿನ ಕಲಿಕೆಯನ್ನು ಪಠ್ಯಕ್ರಮಕ್ಕೆ ಹೇಗೆ ಜೋಡಿಸಬಹುದು ಎಂದು ಆಲೋಚಿಸ ಬಹುದು. ಈ ಕಲೆಗೆ ಪಠ್ಯಕ್ರಮದಿಂದ ಬಹಳ ದೂರ ಇರಬೇಕಿಲ್ಲ. ಅರ್ಥೈಸಿಕೊಳ್ಳವ ದೃಷ್ಟಿಕೋನ ಬದಲಾಗಬೇಕು’ ಎನ್ನುತ್ತಾರೆ ಯೋಜನಾಧಿಕಾರಿ ಅನುಪಮಾ ಪ್ರಕಾಶ.
ಮಂಡ್ಯ ಹಾಗೂ ಬಳ್ಳಾರಿ ಜಿಲ್ಲೆಯಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳು ಮಕ್ಕ ಳೊಂದಿಗೆ ಬೆರೆತು ಗ್ರಾಮದೊಳಗೆ ಹೆಜ್ಜೆಕುಣಿತ, ಡೊಳ್ಳು ಕುಣಿತ ಹಾಗೂ ಕೋಲಾಟವಾಡಿದರು.

ಗ್ರಾಮದಲ್ಲಿ ಮೆರವಣಿಗೆಯೂ ನಡೆಯಿತು. 10 ತಿಂಗಳ ವರೆಗೆ ನಡೆದ ಚಟುವಟಿಕೆಗಳ ಸಾರವನ್ನು ಶರಣ ಬಸವೇಶ್ವರ ದೇಗುಲ ಮುಂದೆ ‘ಸಾಕ್ಷ್ಯಚಿತ್ರ’ ಹಾಗೂ ಮಕ್ಕಳಿಂದಲೇ ರೂಪುಗೊಂಡ ‘ನಮ್ಮೂರ ಹಬ್ಬ’ ನಾಟಕ ಪ್ರದರ್ಶನಗೊಂಡಿತು. ಮಕ್ಕಳ ಕಲಾಪ್ರದರ್ಶನಕ್ಕೆ ಗ್ರಾಮಸ್ಥರಲ್ಲಿ ಬೆರಗು ಮೂಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.