ಕೊಪ್ಪಳ: ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ 23 ವರ್ಷಗಳ ಹಿಂದೆ ಜನತಾ ದಳದಿಂದ ಸ್ಪರ್ಧಿಸಿ ಸೋಲು ಕಂಡ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಇಂದು ಜೆಡಿಎಸ್ನ ಸ್ಥಿತಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವಂತಾಗಿದೆ.

ಕ್ಷೇತ್ರದ ಮತದಾರರು 1991ರ ದಿನಗಳನ್ನು ಮತ್ತೆ ಮೆಲುಕು ಹಾಕಿಕೊಳ್ಳುತ್ತಿದ್ದಾರೆ. ಅಂದು ಸಿದ್ದರಾಮಯ್ಯ ಅವರು ಕಾಂಗ್ರೆಸ್ನ ಬಸವರಾಜ ಪಾಟೀಲ ಅನ್ವರಿ ವಿರುದ್ಧ 11,197 ಮತಗಳ ಅಂತರದಲ್ಲಿ ಸೋತಿದ್ದರು.

ಆದರೆ, ಲೋಕಸಭಾ ಕ್ಷೇತ್ರದಲ್ಲಿ 10 ಬಾರಿ ಗೆಲುವು ಸಾಧಿಸಿ ಭದ್ರಕೋಟೆ ಸ್ಥಾಪಿಸಿದ್ದ ಕಾಂಗ್ರೆಸ್ಗೆ 2009ರ ಚುನಾವಣೆ ಭಾರಿ ಪೆಟ್ಟು ನೀಡಿತ್ತು. ಅದುವರೆಗೆ ಗೆಲ್ಲಲು ಪರದಾಡುತ್ತಿದ್ದ ಬಿಜೆಪಿಗೆ ಮೊದಲ ಬಾರಿಗೆ ಲೋಕಸಭಾ ಸ್ಥಾನದ ಖಾತೆ ತೆರೆದ ಸಮಾಧಾನ ತಂದಿತ್ತು.

ನಾಲ್ಕು ಬಾರಿ ಕಾಂಗ್ರೆಸ್ ಸಂಸದರಾಗಿದ್ದ ಎಚ್.ಜಿ.ರಾಮುಲು (1980, 84, 98, 99) ಅವರ ಹಿಡಿತಕ್ಕೊಳಪಟ್ಟಿದ್ದ ಕೊಪ್ಪಳ– ರಾಯಚೂರು ಜಿಲ್ಲೆಯ ‘ಶ್ವೇತಭವನ’ದ (ಎಚ್.ಜಿ.ರಾಮುಲು ನಿವಾಸಕ್ಕೆ ಕಾರ್ಯಕರ್ತರು ಇಟ್ಟಿರುವ ಹೆಸರು) ಅಡಿಪಾಯ 2004ರಿಂದ ಅಲುಗಾಡತೊಡಗಿತು.

ಎಚ್.ಜಿ.ರಾಮುಲು ಎಂಬ ಪ್ರಶ್ನಾತೀತ ನಾಯಕನಿಗೆ ಸವಾಲೆಂಬಂತೆ 2004ರಲ್ಲಿ ಅದೇ ಪಕ್ಷದಿಂದ ಹೊರಹೊಮ್ಮಿದ ಕುರುಬ ಸಮಾಜದ ಕೆ.ವಿರೂಪಾಕ್ಷಪ್ಪ ಟಿಕೆಟ್ ಗಿಟ್ಟಿಸಿಕೊಂಡು ಗೆದ್ದರು. ಹಾಗೆ ಗೆದ್ದವರು ಇಂದು ಬಿಜೆಪಿ ತೆಕ್ಕೆ ಸೇರಿದ್ದಾರೆ. ರಾಮುಲು ಕುಟುಂಬದಿಂದ ಮತ್ತೊಬ್ಬ ಪ್ರಭಾವಿ ನಾಯಕ ಮುಂದೆ ಬರಲಿಲ್ಲ. ರಾಮುಲು ಪುತ್ರ ಎಚ್.ಜಿ.ಚನ್ನಕೇಶವ ಕೂಡ ಬಿಜೆಪಿ ಸೇರಿದ್ದಾರೆ.

1957ರಿಂದ 2004ರವರೆಗೆ ಇಲ್ಲಿ ಕಾಂಗ್ರೆಸ್ 10 ಬಾರಿ ಇಲ್ಲಿ ಗೆದ್ದಿದೆ. 1952ರ ಮೊದಲ ಚುನಾವಣೆಯಲ್ಲಿ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಪಕ್ಷೇತರರಾಗಿ ಗೆದ್ದಿದ್ದರು. 1957ರಲ್ಲಿ ಸಂಗಣ್ಣ ಅಗಡಿ ಅವರು ಕಾಂಗ್ರೆಸ್ ಖಾತೆ ತೆರೆದರು.

1962ರಲ್ಲಿ ಶಿವಮೂರ್ತಿ ಸ್ವಾಮಿ ಅವರು ಲೋಕಸೇವಕ ಸಂಘದಿಂದ ಗೆದ್ದರು. 1971ರಲ್ಲಿ ಸಿದ್ರಾಮೇಶ್ವರ ಸ್ವಾಮಿ ಅವರು ಕಾಂಗ್ರೆಸ್ಸೇತರರಾಗಿ, 1989ರಲ್ಲಿ ಬಸವರಾಜ ಪಾಟೀಲ ಅನ್ವರಿ, 1996ರಲ್ಲಿ ಬಸವರಾಜ ರಾಯರಡ್ಡಿ ಅವರು ಜನತಾದಳದಿಂದ ಹಾಗೂ 2009ರಲ್ಲಿ ಶಿವರಾಮಗೌಡ ಬಿಜೆಪಿಯಿಂದ ಸಂಸದರಾಗಿದ್ದಾರೆ. ರಾಯರಡ್ಡಿ ಈಗ ಕಾಂಗ್ರೆಸ್ ಶಾಸಕ.

ಬದಲಾವಣೆಯ ಗಾಳಿ: ಬದಲಾವಣೆಗೆ ಕಾರಣಗಳು ಹಲವು. ಈ ಭಾಗದ ವಿಶೇಷ ಮೀಸಲಾತಿಗೆ ನಡೆದ ಹೋರಾಟಗಳಾಗಲಿ, ಪ್ರದೇಶವನ್ನು ನೀರಾವರಿಗೆ ಒಳಪಡಿಸುವುದು, ಮೂಲಸೌಕರ್ಯ, ಶಿಕ್ಷಣ ಅಭಿವೃದ್ಧಿಪಡಿಸುವ ವಿಷಯವಾಗಲಿ, ಪಕ್ಷ ಬದಲಾಯಿಸುವ ಅಭ್ಯರ್ಥಿಗಳ ಸ್ವಭಾವ ಇವ್ಯಾವುದೂ ಕೂಡಾ ಮತದಾರರ ದೃಷ್ಟಿಯಲ್ಲಿ ನಿರ್ಣಾಯಕ ಅಂಶಗಳಲ್ಲ.

ಕ್ಷೇತ್ರಕ್ಕೆ ಹೊಸಬರ ಪ್ರವೇಶವಾಯಿತು. ಪರ್ಯಾಯ ಅಭ್ಯರ್ಥಿಗಳಿದ್ದಾರೆ ಎಂಬುದು ಮನವರಿಕೆಯಾದಾಗ ಮತದಾರರು ಹೊಸಬರಿಗೆ ಮಣೆ ಹಾಕಿದರು. ಅದರ ಪರಿಣಾಮವೇ ಇಲ್ಲಿ ಬೇರೂರಿದ್ದ ಕಾಂಗ್ರೆಸ್ನೊಳಗೇ ಹೊಸ ನಾಯಕರು ಗೆದ್ದುಬಂದರು. ಬಿಜೆಪಿಯತ್ತಲೂ ಜನ ಒಲವು ತೋರಿದರು.

ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಕುರುಬ ಸಮಾಜ ಪ್ರಬಲ ಶಕ್ತಿಗಳು. ಆದರೂ ಕಾಂಗ್ರೆಸ್ನಿಂದ ಹಿಂದುಳಿದ ಸಮಾಜದ ಅಭ್ಯರ್ಥಿಗಳು ಗೆದ್ದ ಇತಿಹಾಸವಿದೆ. ಕೊಪ್ಪಳ ಜಿಲ್ಲಾ ಪಂಚಾಯಿತಿಯ 27 ಸದಸ್ಯರ ಪೈಕಿ 14 ಬಿಜೆಪಿ, 9 ಮಂದಿ ಕಾಂಗ್ರೆಸ್ ಸದಸ್ಯರು. ಇಲ್ಲಿ ಬಿಜೆಪಿಯ ಬೆಂಬಲ ಪಡೆದು ಕಾಂಗ್ರೆಸ್ ಅಧಿಕಾರದಲ್ಲಿದೆ.

*ಕೊಪ್ಪಳ ನಗರಸಭೆ ಕಾಂಗ್ರೆಸ್ ಹಾಗೂ ಗಂಗಾವತಿ ನಗರಸಭೆ ಜೆಡಿಎಸ್ ಹಿಡಿತದಲ್ಲಿದೆ. ಯಲಬುರ್ಗಾ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.

*ಕೊಪ್ಪಳ, ಗಂಗಾವತಿ, ಸಿಂಧನೂರು, ಸಿರಗುಪ್ಪ ತಾ.ಪಂ.ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.

*ಕುಷ್ಟಗಿ ತಾ.ಪಂ. ಬಿಜೆಪಿ ಹಿಡಿತದಲ್ಲಿದೆ. ಪುರಸಭೆಯಲ್ಲಿ ಬಿಜೆಪಿ ಬಹುಮತ ಇದ್ದರೂ ಎಸ್.ಟಿ. ಮಹಿಳೆ ಸ್ಥಾನ ಮೀಸಲಾತಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.

*ಯಲಬುರ್ಗಾ ತಾಲ್ಲೂಕು ಪಂಚಾಯಿತಿಯಲ್ಲಿ ಬಿಜೆಪಿ–ಕಾಂಗ್ರೆಸ್ ಸಮಾನ ಸಂಖ್ಯೆಯ ಸದಸ್ಯರಿದ್ದಾರೆ. ಮೀಸಲಾತಿ ಎಸ್ಸಿ ಮಹಿಳೆಗೆ ಬಂದ ಕಾರಣ ಬಿಜೆಪಿ ಸದಸ್ಯೆ ಅಧ್ಯಕ್ಷರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.