ಬುಧವಾರ, ಜನವರಿ 22, 2020
27 °C

ವ್ಯಕ್ತಿ ಅಪಹರಣ: ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ವ್ಯಕ್ತಿಯನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಹಾಗೂ ಕಾರಿನ ಮ್ಯಾಗ್ ವ್ಹೀಲ್ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೋಮವಾರ ವಿನೋಬನಗರ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ಹಳೆನಗರ ವಾಸವಿ ಕಾಲೊನಿ ನಿವಾಸಿ ನಿತಿನ್ ಶೆಟ್ಟಿ (25), ಧರ್ಮ (30) ಬಂಧಿತ ಆರೋಪಿಗಳು. 2018ರಲ್ಲಿ ವಿನೋಬನಗರ ಚೌಕಿಯ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 4 ಮ್ಯಾಗ್ ವ್ಹೀಲ್‌ಗಳನ್ನು ಕಳವು ಮಾಡಿದ್ದು ಹಾಗೂ ಈಚೆಗೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಬಗ್ಗೆ ದಾಖಲಾದ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳಾಗಿದ್ದಾರೆ.

ಆರೋಪಿಗಳಿಂದ ಅಂದಾಜು ಮೌಲ್ಯ ₹ 60 ಸಾವಿರ, ಕಾರು ಮತ್ತು 4 ವ್ಹೀಲ್‌ಗಳು, ಅಪಹರಣಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ ₹ 2.50 ಲಕ್ಷ ವಶಪಡಿಸಿಕೊಂಡು, ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು