ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ನೀರು ಹರಿಸುವ ಪ್ರಯತ್ನ ಮಾಡಬೇಕು.
ನಾರಾಯಣಗೌಡ ಮಾಜಿ ಸಚಿವ
ನೀರು ಹರಿಯದಿರುವುದರಿಂದ ಇಷ್ಟೂ ಭಾಗದಲ್ಲಿ ಬೆಳೆವ ಭತ್ತ ಮತ್ತು ಕಬ್ಬು ತೆಂಗು ಅಡಿಕೆ ಶುಂಠಿ ರಾಗಿ. ಜೋಳ ಹಲಸಂದೆ ಹುರುಳಿ ತೆಂಗು ಅಡಿಕೆ ಬೆಳೆಗಳು ಹಾಳಾಗುತ್ತಿವೆ.
ಮುದುಗೆರೆ ರಾಜೇಗೌಡ ರೈತ ಮುಖಂಡ
235 ಕೆರೆಗಳಿಗೆ ಆಶ್ರಯ
ಹೇಮಾವತಿ ಜಲಾಶಯದ ಮುಖ್ಯನಾಲೆ ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ 106ನೇ ಕಿ.ಮೀ ಯಿಂದ ಆರಂಭವಾಗಿ 150.97ನೇ ಕಿ.ಮೀವರೆಗೆ ಒಟ್ಟು 45975 ಕಿ.ಮೀ ಉದ್ದ ಹರಿಯುತ್ತದೆ. ಈ ನಾಲೆ ವ್ಯಾಪ್ತಿಯಲ್ಲಿ ವಿತರಣಾ ನಾಲಾ ಸಂಖ್ಯೆ 47ರಿಂದ 64ರವರೆಗೆ ಒಟ್ಟು 17 ವಿತರಣಾ ನಾಲೆಗಳಿದ್ದು ಒಟ್ಟು 54088 ಎಕರೆ ಪ್ರದೇಶ ಅರೆ ನೀರಾವರಿಗೆ ಒಳಪಟ್ಟಿದೆ. ಹೇಮಾವತಿ ಜಲಾಶಯ ಯೋಜನಾ ವ್ಯಾಪ್ತಿಗೆ ಸೇರಿದ 106 ಕೆರೆಗಳು ಸಣ್ಣ ನೀರಾವರಿ ಇಲಾಖೆಗೆ 8 ಕೆರೆಗಳು ಮತ್ತು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಸೇರಿದ 121 ಕೆರೆಗಳು ಸೇರಿ ತಾಲ್ಲೂಕಿನಲ್ಲಿ ಒಟ್ಟು 235 ಕೆರೆಗಳಿದ್ದು ಹೇಮಾವತಿ ನದಿ ಅಣೆಕಟ್ಟೆ ನಾಲೆಗಳಾದ ಮಂದಗೆರೆ ಬಲ ಮತ್ತು ಎಡದಂಡೆ ನಾಲೆ ಮತ್ತು ಹೇಮಗಿರಿ ನಾಲಾ ವ್ಯಾಪ್ತಿಯ 16556 ಎಕರೆ ಕೃಷಿ ಭೂಮಿ ಹೇಮೆಯ ನೀರನ್ನು ಅಶ್ರಯಿಸಿ ನಿಂತಿವೆ’ ಎಂದು ನೀರಾವರಿ ಇಲಾಖೆಯ ಅಂಶಗಳು ಹೇಳುತ್ತವೆ.