ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು: ಸಾವಿರಾರು ಅಭಿಮಾನಿಗಳೊಂದಿಗೆ ನಡೆದ ಅಭಿಷೇಕ್ - ಅವೀವಾರ ಬೀಗರ ಔತಣ ಕೂಟ

Published 16 ಜೂನ್ 2023, 15:57 IST
Last Updated 16 ಜೂನ್ 2023, 15:57 IST
ಅಕ್ಷರ ಗಾತ್ರ

ಮದ್ದೂರು: ಮಾಜಿ ಸಚಿವ ಹಾಗೂ ಸಂಸದರಾದ ದಿ. ಅಂಬರೀಷ್ ರ ಪುತ್ರ ಅಭಿಷೇಕ್ ಹಾಗೂ ಅವೀವಾ ರ ಬೀಗರ ಔತಣ ಕೂಟವು ಸಾವಿರಾರು ಅಭಿಮಾನಿಗಳ ನಡುವೆ ಶುಕ್ರವಾರ ಮದ್ದೂರು ಬಳಿಯ ಗೆಜ್ಜಲಗೆರೆ ಕಾಲೋನಿ ಬಳಿ ನಡೆಯಿತು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ 4 ತಿಂಗಳ ಹಿಂದೆ ಪ್ರಧಾನಿ ಮೋದಿ ರವರ ಕಾರ್ಯಕ್ರಮ ನಡೆದಿದ್ದ ಜಾಗದಲ್ಲಿಯೇ ಸುಮಾರು 12 ರಿಂದ 15 ಎಕರೆ ಜಾಗದಲ್ಲಿ ವಿಶಾಲವಾದ ಜರ್ಮನ್ ಶಾಮಿಯಾನವನ್ನು ಹಾಗೂ ವೇದಿಕೆಯನ್ನು ಹಾಕಲಾಗಿತ್ತು.

ವೇದಿಕೆಯ ಮುಂದೆ ಅಂಬರೀಷ್ ರ ಭಾವಚಿತ್ರವನ್ನು ಹಾಕಲಾಗಿತ್ತು ಅಲ್ಲಿ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು, ಮಂಡ್ಯದ ಬಾಣಸಿಗರಾದ ಪ್ರಕಾಶ್ ಅಡುಗೆ ಜವಾಬ್ದಾರಿ ಹೊತ್ತಿದ್ದರು, ಸುಮಾರು 200 ಮಂದಿ ಅಡುಗೆ ಸಹಾಯಕರು, ನೂರಾರು ಮಂದಿ ಅಡುಗೆ ಮಾಡುವವರು ಹಾಗೂ 400 ಮಂದಿಊಟ ಬಡಿಸುವವರನ್ನು ನಿಯೋಜಿಲಾಸಲಾಗಿತ್ತು.

ಆರತಕ್ಷತೆ ವೇದಿಕೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದನಂತೆಯೇ ಸ್ವಲ್ಪ ಹೊತ್ತಲ್ಲೇ ಅಭಿಷೇಕ್ - ಅವೀವಾ ದಂಪತಿ ವೇದಿಕೆಯಿಂದ ಬೇರೆಡೆಗೆ ಹೊರಟರು, ಈ ವೇಳೆ ಅಭಿಷೇಕ್ ಅಂಬರೀಷ್ ಪತ್ನಿ ಅವೀವಾ ಪ್ರತಿಕ್ರಿಯಿಸಿ ಮಾತನಾಡಿ, ಇಷ್ಟೊಂದು, ಈ ರೀತಿಯ ಜನಸಂದಣಿಯನ್ನು ನಾನು ನೋಡಿರಲಿಲ್ಲ, ಮಂಡ್ಯ ಜನತೆಯು ಅಂಬರೀಷ್ ಮೇಲಿಟ್ಟಿದ್ದ ಅಭಿಮಾನ ಇಷ್ಟರಮಟ್ಟಕ್ಕೆ ಈಗಲೂ ಇದೆ ಎಂದು ಇದರಿಂದ ಅರ್ಥವಾಗುತ್ತದೆ ಎಂದರು.

ಅಭಿಷೇಕ್ ಅಂಬರೀಷ್ ಮಾತನಾಡಿ ನಮ್ಮ ತಂದೆ ಅಂಬರೀಷ್ ರವರಿಗೆ ನನ್ನ ಮದುವೆಯನ್ನು ಮಂಡ್ಯದ ಜನರ ಸಮ್ಮುಖದಲ್ಲಿ ಮಾಡಬೇಕೆಂಬ ಬಯಕೆಯಿತ್ತು ಅದರಂತೆ ಇಂದು ಬೀಗರ ಔತಣ ಕೂಟ ಕಾರ್ಯಕ್ರಮವನ್ನು ಗೆಜ್ಜಲಗೆರೆ ಬಳಿ ಹಮ್ಮಿಕೊಂಡಿದ್ದೇವೆ ಎಂದರು.

ಸುಮಾರು 70 - 80 ಸಾವಿರ ಮಂದಿ ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು, ಬಾಡೂಟ ಕ್ಕಾಗಿ ಜನರು ಪೊಲೀಸರನ್ನು ಲೆಕ್ಕಿಸದೇ ಮುಗಿ ಬಿದ್ದರು, ಈ ವೇಳೆ ತಳ್ಳಾಟ - ನೂಕಾಟ ಉಂಟಾಗಿ 4- 5 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿ ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಕೊಂಡರು.

ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು, ಸಂಸದೆ ಸುಮಲತಾ ಅಂಬರೀಷ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಚಿತ್ರ ನಟರಾದ ದೊಡ್ಡಣ್ಣ, ಮುಖಂಡರಾದ ಮದನ್, ಬೇಲೂರು ಸೋಮಶೇಖರ್, ಹನಕೆರೆ ಶಶಿ ಸೇರಿದಂತೆ ಇತರ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT