ಮಂಡ್ಯ: ವರ್ತಮಾನದಲ್ಲಿ ಘಟಿಸುವ ಆವಿಷ್ಕಾರಗಳು ಮತ್ತು ಬದಲಾವಣೆಗಳು ಸಂಸ್ಕೃತಿಯನ್ನು ಆಧರಿಸಿರುತ್ತವೆ. ಉತ್ಸವಗಳು ನೆಲ ಬೇರಿನ ಸಂಸ್ಕೃತಿಯ ಪ್ರತೀಕಗಳು ಎಂದು ಲೇಖಕ ಕೊತ್ತತ್ತಿ ರಾಜು ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಜ್ಞಾನದೀಪ ವಿದ್ಯಾಲಯ ಎಜುಕೇಷನ್ ಟ್ರಸ್ಟ್ ಹಾಗೂ ಅಗಮ್ಯ ಕಿಡ್ಸ್ ಕಾರ್ನರ್ ವತಿಯಿಂದ ಆಯೋಜಿಸಿದ್ದ ಅಗಮ್ಯ ಉತ್ಸವ-11 ಹಾಗೂ ‘ಅಗಮ್ಯ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನ ಮಾಡುವುದೆಂದರೆ ಜೀವದಾನ ಮಾಡಿದಂತೆ. ಈವರೆಗೆ 75ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವವರು ಎಂ.ಸಿ. ಲಂಕೇಶ್, ಇದು ಮನುಷ್ಯ ಪ್ರೀತಿಯ, ಮಾನವತೆಯ ಕೈಂಕರ್ಯ ಎಂದು ಹೇಳಿದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಎಲ್.ರಮ್ಯಾ, ನೆಲದನಿ ಬಳಗದ ಅಧ್ಯಕ್ಷ ಎಂ.ಸಿ. ಲಂಕೇಶ್ ಹಾಗೂ ಪತ್ರಕರ್ತ ಬಿ.ಜೆ. ಸೋಮಶೇಖರ್ ಅವರಿಗೆ ‘ಅಗಮ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಗಮ್ಯ ಕಿಡ್ಸ್ ಕಾರ್ನರ್ ಮಕ್ಕಳು ನಿರರ್ಗಳವಾಗಿ ಭಗವದ್ಗೀತೆ ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಅಗಮ್ಯ ಕಿಡ್ಸ್ ಕಾರ್ನರ್ ಅಧ್ಯಕ್ಷ ಬಿ.ಸೋಮಶೇಖರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಆರ್. ಗೀತಾ ಮಂಜು ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಚ್.ಆರ್.ಕನ್ನಿಕಾ ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.