ಮಂಡ್ಯ: ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಅವುಗಳು ಮತ್ತಷ್ಟು ಪರಿಣಾಮಕಾರಿಯಾಗಿ ರೈತರ ಬೇಸಾಯಕ್ಕೆ ತಕ್ಕಂತೆ ಕೆಲಸ ಮಾಡಬೇಕು ಎಂದು ಶಾಸಕ ಪಿ.ರವಿಕುಮಾರ್ಗೌಡ ಸಲಹೆ ನೀಡಿದರು.

ತಾಲ್ಲೂಕಿನ ಹುನುಗನಹಳ್ಳಿ ಗ್ರಾಮದಲ್ಲಿ ಮುತ್ತೇಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಡೆದ ಉಪಗೋದಾಮು ಕಟ್ಟಡದ ಉದ್ಘಾಟನೆ ಮತ್ತು ನಾಮ ಫಲಕ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರವು ರೈತರ ಪರವಾಗಿ ಕೆಲಸ ಮಾಡುತ್ತಿದೆ. ಹುನಗನಹಳ್ಳಿ ಗ್ರಾಮವು 34 ಕಿ.ಮೀ. ದೂರದಲ್ಲಿದ್ದು, ಈ ಗ್ರಾಮಕ್ಕೂ ಅಗತ್ಯವಾಗಿ ಅಭಿವೃದ್ಧಿ ಯೋಜನೆ ಮಾಡಿಸಲಾಗುವುದು. ಬಸರಾಳು ಗ್ರಾಮದಿಂದ ಮುತ್ತೇಗೆರೆ ಗ್ರಾಮದ ರಸ್ತೆಯು ಸುಮಾರು ₹10 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಒಟ್ಟಾರೆ ಮುಖ್ಯಮಂತ್ರಿ ಅನುದಾನದಡಿ ವಿಶೇಷ ಯೋಜನೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮ ಮಾಡಲಾಗುವುದು. ಜೊತೆಗೆ ಎಲ್ಲ ಪಕ್ಷದವರ ಸಹಕಾರದಿಂದಲೂ ಅಭಿವೃದ್ಧಿ ಮಾಡಲು ಮುಂದಾಗುತ್ತೇವೆ’ ಎಂದು ಭರವಸೆ ನೀಡಿದರು.

‘ಹೇಮಾವತಿ ಕೊನೆಹಂತದ ವ್ಯಾಪ್ತಿಗೆ ಈ ಗ್ರಾಮಗಳು ಬರುವುದರಿಂದ ನೀರು ಬರಲ್ಲ ಎಂಬುವ ಮಾತು ಕೇಳಿ ಬರುತ್ತದೆ. ಇದರ ಆಲೋಚನೆ ಮಾಡಿದ ಮುಖ್ಯಮಂತ್ರಿ ಅವರು ಬಸರಾಳು, ಹೊಣಕೆರೆ, ದೇವಲಾಪುರ ಗ್ರಾಮ ವ್ಯಾಪ್ತಿಯ ಕೆರೆಗಳಿಗೆ ಶ್ರೀರಂಗಪಟ್ಟಣದಿಂದ ನೀರುಣಿಸಲು ₹1,300 ಕೋಟಿ ಡಿಪಿಆರ್ ರೆಡಿಯಾಗಿದೆ. ಇನ್ನೆರಡು ತಿಂಗಳಲ್ಲಿ ಸದನದಲ್ಲಿಟ್ಟು ಚರ್ಚೆ ನಡೆಸಿ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ, ಒಟ್ಟಾರೆ ಬಸರಾಳು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತೇವೆ’ ಎಂದು ವಿವರಿಸಿದರು.

ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಚ್.ಅಪ್ಪಾಜಿ ಮಾತನಾಡಿ, ‘ಹುನಗನಹಳ್ಳಿ ಗೋದಾಮು ಕಟ್ಟಡ ನಿರ್ಮಾಣಕ್ಕೆ ಶಾಸಕ ಪಿ.ರವಿಕುಮಾರ್ಗೌಡ ಅವರು ₹10, ಸಂಸದೆ ಸುಮಲತಾ ಅಂಬರೀಷ್ ಅವರ ಅಧಿಕಾರದ ಅವಧಿಯಲ್ಲಿ ₹5 ಲಕ್ಷ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ₹2.50 ಲಕ್ಷ ನೀಡಿದ್ದಾರೆ. ಮತ್ತಷ್ಟು ಅನುದಾನಕ್ಕಾಗಿ ಶಾಸಕರ ಬಳಿ ಮನವಿ ಮಾಡಿದ್ದೇವೆ ಅದನ್ನು ನೀಡುವುದಾಗಿ ಹೇಳಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಅಶೋಕ್, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೆ.ರಾಧಕೃಷ್ಣ, ಮುಡಾ ಅಧ್ಯಕ್ಷ ನಯೀಮ್, ಮುಖಂಡರಾದ ಸತೀಶ್, ಶೈಲೇಶ್, ಮಂಜೇಗೌಡ, ಲಕ್ಷ್ಮಿ, ಸುಧಾ, ಕೃಷ್ಣೇಗೌಡ ಭಾವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.