ಮದ್ದೂರು: ತಾಲ್ಲೂಕಿನ ಆಲೂರು ಗ್ರಾಮದ ಬೀರೇಶ್ವರಸ್ವಾಮಿಯ ಜೀರ್ಣೋದ್ಧಾರಗೊಂಡ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ಫೆ.24 ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಈ ಕುರಿತು ಶನಿವಾರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ವ್ಯವಸ್ಥಾಪಕ, ಪ್ರಧಾನ ಅರ್ಚಕ ಪೂಜಾರಿ ನಿಜಬೀರಪ್ಪ ಹೆಗ್ಗಡೆ ಕರಪತ್ರ ಬಿಡುಗಡೆ ಗೊಳಿಸಿ ಮಾಹಿತಿ ನೀಡಿ ಮಾತನಾಡಿದರು.

‘ಫೆ.24 ರಂದು ಸಂಜೆ ಮೂಲ ದೇವತಾ ಪ್ರಾರ್ಥನೆ, ಬಲಿ ಪ್ರಧಾನ ಪರ್ಯಗ್ನಿಕರಣ, ಸಂಜೆ ಆಲೂರು ಮತ್ತು ಆಲೂರು ದೊಡ್ಡಿ ಗ್ರಾಮಸ್ಥರಿಂದ ಮೀಸಲು ನೀರು ತರುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.25ರಂದು ಬೆಳಿಗ್ಗೆ ವೇದಪಾರಾಯಣ, ವಿಗ್ರಹ ಪ್ರತಿಷ್ಠೆ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.

ಫೆ.26 ರಂದು ಅನ್ನಸಂತರ್ಪಣೆ ಸೇರಿದಂತೆ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಫೆ.27 ರಂದು ಹುಲಿಪ್ರದರ್ಶನ, ಕತ್ತಿಪವಾಡ, ಮೈಲಾರ ಲಿಂಗದಾರಿಗಳಾದ ಗೊರವಯ್ಯ ಹಾಗೂ ಗಣಾಚಾರಿಗಳಿಂದ ಬೀರೇಶ್ವರಸ್ವಾಮಿ ಗಡಿ ಕೂಟದ ದೇವರುಗಳ ಮೆರವಣಿಗೆ ಸೇರಿದಂತೆ ಇತರೆ ಕಾರ್ಯಕ್ರಮ ನಡೆಯಲಿದೆ. ಪೂಜಾ ಕಾರ್ಯಕ್ರಮದ ಕಾರ್ಯಕ್ರಮಗಳ ನೇತೃತ್ವವನ್ನು ನಂಜನಗೂಡಿನ ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್ ವಹಿಸಲಿದ್ದು, ಶಾಸಕ ಕೆ.ಎಂ.ಉದಯ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.

ಗ್ರಾಮದ ಯಜಮಾನರಾದ ಚೇತನ್, ನಾಗೇಂದ್ರ, ಶ್ರೀಧರ್, ಮಧು ಹೆಗಡೆ, ಸೋಮಶೇಖರ್, ಬೀರಯ್ಯ, ರಾಮಣ್ಣ, ಭರತ್, ಕಾರ್ತಿಕ್,ಮಹದೇವು, ಪೂಜಾರಿಗಳಾದ ಶಿವಬೀರಯ್ಯ, ಬೀರೇಶ್ ಕಬ್ಬಾರೆ, ಬೀರೇಶ್ ಆಲೂರು, ಬೀರೇಶ್ ಎಲೆಕೆರೆ, ಮುಖಂಡರಾದ ದಿನೇಶ್, ಸುಪ್ರೀತ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.