ಭಾರತೀನಗರ: ಉತ್ತಮ ತಳಿಯ ರಾಸುಗಳನ್ನು ಸಾಕುವುದರಿಂದ ಹೈನುಗಾರರಿಗೆ ಅಧಿಕ ಲಾಭಾಂಶ ಸಿಗಲಿದೆ ಎಂದು ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ತಿಳಿಸಿದರು.

ಸಮೀಪದ ಯಲಾದಹಳ್ಳಿ ಗ್ರಾಮದಲ್ಲಿ ಹಾಲು ಮಹಾ ಮಂಡಳಿ ಬೆಂಗಳೂರು, ಮನ್ಮುಲ್ ಗೆಜ್ಜಲಗೆರೆ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಡ್ಯ ಮತ್ತು ಯಲಾದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಇವರ ಸಹಯೋಗದಲ್ಲಿ ನಡೆದ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರೈತರು ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದು, ಹೆಚ್ಚು ಹೈನುಗಾರಿಕೆಗೆ ಒತ್ತು ನೀಡುತ್ತಿದ್ದಾರೆ. ಇದರಿಂದ ಅವರು ಆರ್ಥಿಕವಾಗಿ ಸದೃಢತೆಯನ್ನು ಸಾಧಿಸಿದ್ದಾರೆ. ಹೈನುಗಾರರೊಟ್ಟಿಗೆ ಮನ್ಮುಲ್ ಸಹ ಇರಲಿದೆ’ ಎಂದು ಭರವಸೆ ನೀಡಿದರು.

ಮನ್ಮುಲ್ ನಿರ್ದೇಶಕ ಎನ್.ಕೆ.ಹರೀಶಬಾಬು ಮಾತನಾಡಿ, ‘ಗುಣಮಟ್ಟದ ಹಾಲು ರೈತರಿಂದ ಸರಬರಾಜು ಆದಲ್ಲಿ ಮನ್ಮುಲ್ ಲಾಭಗಳಿಸುತ್ತದೆ. ಅಲ್ಲದೆ ಗುಣಮಟ್ಟದ ಹಾಲಿನಿಂದ ಒಕ್ಕೂಟದಲ್ಲಿ ಉತ್ಪಾದಿಸುವ ಉತ್ಪನ್ನಗಳು ಗುಣಮಟ್ಟದಿಂದ ಕೂಡಿರಲಿವೆ. ಹಾಗೂ ಅವುಗಳಿಗೆ ಹೆಚ್ಚು ಬೇಡಿಕೆ ಸಿಗಲಿದೆ’ ಎಂದು ಹೇಳಿದರು.

ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಚೇಶ್ ಮಾತನಾಡಿದರು. ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ 200 ಹೆಚ್ಚು ಎಚ್.ಎಫ್, ಜರ್ಸಿ, ನಾಟಿ ಹಸು, ಎಮ್ಮೆಕರುಗಳು ಪಾಲ್ಗೊಂಡಿದ್ದವು. 4,4ರಿಂದ 8 ಹಾಗೂ 8 ರಿಂದ 12 ತಿಂಗಳ ಕರುಗಳಲ್ಲಿ 18 ಕರುಗಳನ್ನು ಗುರುತಿಸಿ ಅವುಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು. ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಭಾಗವಹಿಸಿದ ಎಲ್ಲಾ ರೈತರಿಗೂ ಪೂರಕ ಆಹಾರದ ಕಿಟ್ ನನ್ನು ವಿತರಣೆ ಮಾಡಲಾಯಿತು.

ಮನ್ಮುಲ್ ವ್ಯವಸ್ಥಾಪಕ ಡಾ.ಅಕಪಲ್ಲರೆಡ್ಡಿ, ಪಶುಪಲನಾ ಇಲಾಖೆಯ ಉಪನಿನಿರ್ದೇಶಕ ಡಾ.ಶಿವಲಿಂಗಯ್ಯ, ಸಹಾಯ ನಿರ್ದೇಶಕ ಡಾ.ಟಿ.ಎಚ್.ಗೋವಿಂದ್, ಉಪವ್ಯವಸ್ಥಾಪಕ ಡಾ.ಮಂಜೇಶ್ಗೌಡ, ಸಹಾಯಕ ವ್ಯವಸ್ಥಾಪಕರಾದ ಡಾ.ಹೊಂಬೇಗೌಡ, ಡಾ.ನೂತನ್, ಡಾ.ಗೋವರ್ಧನ್, ಡಾ.ದೀಪಕ್, ಹಣಮಂತ ತೋಳಮಡಿ, ವಿಸ್ತರಣಾಧಿಕಾರಿಗಳ ಸೌಮ್ಯ, ಯಲಾದಹಳ್ಳಿ ಡೇರಿ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷ ಪುಟ್ಟಸ್ವಾಮಿ, ತಾ.ಪಂ ಮಾಜಿ ಸದಸ್ಯ ವೈ.ಎಂ.ಬೋರೇಗೌಡ, ನಿಂಗೇಗೌಡ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು, ನೌಕರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.