ಮಂಡ್ಯ: ನಗರಸಭೆಗೆ ಸೇರಿದ ಸ್ಥಳವನ್ನು ಇಲ್ಲಿನ ಸಿಟಿ ಕ್ಲಬ್ ಒತ್ತುವರಿ ಮಾಡಿಕೊಂಡಿರುವ ಸಂಬಂಧ ಜಿಲ್ಲಾಧಿಕಾರಿ ಸೇರಿದಂತೆ ಒಟ್ಟು ಒಂಬತ್ತು ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ನಗರಸಭೆ ಕಚೇರಿಗೆ ಹೊಂದಿಕೊಂಡತಿರುವ ಸಿಟಿಕ್ಲಬ್ ಹಾಲೀ ಅಸ್ತಿತ್ವದಲ್ಲಿರುವ ಸುಮಾರು 45 ಸಾವಿರ ಅಡಿ ಸ್ಥಳವು ಮಂಡ್ಯ ನಗರಸಭೆಗೆ ಸೇರಿದ ಆಸ್ತಿಯಾಗಿದೆ. ಸದರಿ ಒತ್ತುವರಿಯನ್ನು ತೆರವುಗೊಳಿಸಿ ನಗರಸಭೆ ಸುಪರ್ದಿಗೆ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಎಸ್.ಸಂಜಯ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು ನೋಟಿಸ್ ಜಾರಿಗೊಳಿಸಿದೆ.

ನಗರಸಭೆ ಹಾಗೂ ಮುನಿಸಿಪಲ್ ಹೈಸ್ಕೂಲ್ ಮಧ್ಯೆ ಅಸ್ತಿತ್ವದಲ್ಲಿರುವ ಸಿಟಿಕ್ಲಬ್ ಮಂಡ್ಯದ ಹಳೆಯ ಕ್ಲಬ್ಗಳಲ್ಲೊಂದಾಗಿದ್ದು, ಒಟ್ಟು 54 ಸಾವಿರ ಚದುರಡಿಯಲ್ಲಿದೆ. ಸದರಿ ಸಿಟಿಕ್ಲಬ್ ಜಾಗವು ಮಂಡ್ಯ ನಗರಸಭೆಗೆ ಸೇರಿದ ಆಸ್ತಿಯಾಗಿದ್ದು, ಸಿಟಿಕ್ಲಬ್ಗೆ ಯಾವುದೆ ಮಂಜೂರಾತಿಯಾಗಿಲ್ಲ ಎಂಬುದು ಈಗಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತಕರಾರಾಗಿದೆ.

ಸಿಟಿಕ್ಲಬ್ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾದಾಗ ಸಿಟಿ ಕ್ಲಬ್ ತನ್ನದಲ್ಲದ ಭೂಮಿಯಲ್ಲಿ ನಡೆಯುತ್ತಿದ್ದು, ಸದರಿ ಸ್ಥಳವನ್ನು ನಗರಸಭೆ ವಶಕ್ಕೆ ಪಡೆಯಲು 2003ರಲ್ಲೆ ಮಂಡ್ಯದ ಸಿವಿಲ್ ನ್ಯಾಯಾಲಯದಲ್ಲಿ ನಗರಸಭೆ ದಾವೆ ಹಾಕಿತ್ತು. ಈ ಪ್ರಕರಣದ ವಿಚಾರಣೆ ನಡೆದು ನಗರಸಭೆಗೆ ಹೊಂದಿಕೊಂಡಂತಿರುವ ಹೊಸ ಕಟ್ಟಡ ಅಕ್ರಮವಾಗಿದ್ದು ಸದರಿ ಸ್ಥಳವನ್ನು ವಶಕ್ಕೆ ಪಡೆಯುವಂತೆ ನ್ಯಾಯಾಲಯ ಆದೇಶ ಮಾಡಿತ್ತು.

ಒತ್ತುವರಿ ತೆರವಿಗಾಗಿ ಲೋಕಾಯುಕ್ತಕ್ಕು ಸಾರ್ವಜನಿಕ ದೂರುಗಳು ದಾಖಲಾದರೂ ನಗರಸಭೆ ಕ್ರಮ ತೆಗೆದುಕೊಂಡಿಲ್ಲ ಎಂಬುವ ದೂರು ಕೇಳಿಬರುತ್ತಿತ್ತು. ಸಿಟಿಕ್ಲಬ್ ಆಕ್ರಮಿಸಿಕೊಂಡಿರುವ ಭೂಮಿ ತೆರವು ಸಂಬಂಧ ನ್ಯಾಯಾಲಯದ ಆದೇಶ ಪಾಲನೆಗಾಗಿ ಲೋಕಾಯುಕ್ತಕ್ಕೆ ದೂರು ದಾಖಲಾಗುತ್ತಿದ್ದಂತೆ ಆಯುಕ್ತೆ ಪಂಪಶ್ರೀ ಅವರು ನ್ಯಾಯಾಲಯದ ಆದೇಶಾನುಸಾರ ಕ್ರಮವಹಿಸುವುದಾಗಿ ಲೋಕಾಯುಕ್ತಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಈ ನಡುವೆ ಅರ್ಜಿದಾರರು ನಗರಸಭೆಗೆ 2025ರ ಜನವರಿ 1ರಂದು ದೂರು ನೀಡಿ ಸಿಟಿಕ್ಲಬ್ ಸ್ಥಳವನ್ನು ಮಂಡ್ಯ ನಗರಸಭೆಗೆ ಸೇರಿದ ಆಸ್ತಿಯಾಗಿದ್ದು, ನಗರಸಭೆಗೆ ಸೇರಿದ ಆಸ್ತಿಯಲ್ಲಿ ಜೂಜೂ, ಕುಡಿತ ನಡೆಯುತ್ತಿರುವುದರಿಂದ ಈ ಸ್ಥಳವನ್ನು ವಶಕ್ಕೆ ಪಡೆಯುವಂತೆ ಹಾಗೂ ನಗರಸಭೆಗೆ ಸೇರಿದ ಸ್ಥಳವನ್ನು ವಶಕ್ಕೆ ಪಡೆಯುವುದು, ಅಬಕಾರಿ ಸನ್ನದು ರದ್ದುಗೊಳಿಸುವುದು, ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಗಿದೆ.

ನ್ಯಾಯಾಲಯವು ಸರ್ಕಾರದ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ, ಪೌರಾಡಳಿತ ನಿರ್ದೇಶಕರು, ಮಂಡ್ಯ ಅಬಕಾರಿ ಜಿಲ್ಲಾಧಿಕಾರಿ, ಅಬಕಾರಿ ನಿರೀಕ್ಷಕ, ರಾಜ್ಯ ಅಬಕಾರಿ ಇಲಾಖೆ, ಸಿಟಿಕ್ಲಬ್, ಮಂಡ್ಯ ನಗರಸಭೆ, ಸಹಕಾರ ಸಂಘಗಳ ರಿಜಿಸ್ಟರ್ ಸೇರಿ ಒಂಬತ್ತು ಮಂದಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.