ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆ.28ರಂದು ‘ಕಾಂಗ್ರೆಸ್‌ ಹಠಾವೋ ದಲಿತ್‌ ಬಚಾವೋ’ ಸಮಾವೇಶ: ಮೋಹನ್‌ ದಾಸರಿ

Published : 21 ಆಗಸ್ಟ್ 2024, 13:30 IST
Last Updated : 21 ಆಗಸ್ಟ್ 2024, 13:30 IST
ಫಾಲೋ ಮಾಡಿ
Comments

ಮಂಡ್ಯ: ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯ ₹26 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿರುವುದನ್ನು ವಿರೋಧಿಸಿ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದಿಂದ ‘ಕಾಂಗ್ರೆಸ್‌ ಹಠಾವೋ ದಲಿತ್‌ ಬಚಾವೋ’ ಪ್ರತಿಭಟನಾ ಸಮಾವೇಶವನ್ನು ಆ.28 ರಂದು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಒಕ್ಕೂಟದ ರಾಜ್ಯ ಸಂಚಾಲಕ ಮೋಹನ್‌ ದಾಸರಿ ಮನವಿ ಮಾಡಿದರು.

‘ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮುನ್ನ ದಲಿತರ ಪರ ಎಂಬುದನ್ನು ಹೇಳಿ ವಂಚಿಸಿದೆ, ಮುಖ್ಯಮಂತ್ರಿ ಅವರು ದಲಿತ ಸಿದ್ದರಾಮಯ್ಯ ಎನ್ನುತ್ತಿದ್ದರು ಈಗ ಅಧಿಕಾರ ಸಿಕ್ಕ ಕೂಡಲೇ ದಲಿತ ವಿರೋಧಿಯಾಗಿದ್ದಾರೆ, ಇದನ್ನು ವಿರೋಧಿಸಿ ಅಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶ ನಡೆಯಲಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಂವಿಧಾನ ಪರ, ಸಂವಿಧಾನ ರಕ್ಷಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರವು ಸಂವಿಧಾನದ ಯಾವ ಆಶಯವನ್ನು ಪಾಲಿಸುತ್ತಿಲ್ಲ, ಬದಲಿಗೆ ಈ ದೇಶದ ಕಟ್ಟಕಡೆಯ ಸಮುದಾಯವಾದ ದಲಿತರಿಗೆ ಸೌಲಭ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಜೊತೆಗೆ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಾಗಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಆಡಳಿತ ವಿರುದ್ಧ ಪ್ರತಿಭಟಿಸುವ ನಡೆಯೇ ಕಾಂಗ್ರೆಸ್‌ ಹಠಾವೋ ದಲಿತ್‌ ಬಚಾವೋ ಎಂಬ ಸಮಾವೇಶದಲ್ಲಿ ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಇದರ ಬಗ್ಗೆ ಭೇಟಿಗೆಂದು ಕಳೆದು ಆರು ತಿಂಗಳಿಂದಲೂ ಸಮಯ ಕೇಳಿದರೂ ನೀಡಿಲ್ಲ, ವಿದೇಶದಲ್ಲಿ ಓದುವ ವಿದ್ಯಾರ್ಥಿಗಳಿಗೆ ‘ಪ್ರಬುದ್ಧ ಯೋಜನೆ’ ರದ್ದು ಮಾಡಿರುವುದು, ಒಳ ಮೀಸಲಾತಿ ಜಾರಿ ತರುವುದಕ್ಕೂ ಹಿಂದುಮುಂದು ನೋಡುತ್ತಿರುವುದು ಸೇರಿದಂತೆ ಒಟ್ಟು ಒಂಭತ್ತು ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದರು.

ರಾಜ್ಯ ಸಂಚಾಲಕರಾದ ಸಿದ್ದಾಪುರ ಮಂಜುನಾಥ್‌, ರಮೇಶ್‌, ಮುಖಂಡರಾದ ಸಿ.ಕೆ.ಪಾಪಯ್ಯ, ಶಂಕರ್ ರಾಮಲಿಂಗಯ್ಯ, ಪ್ರಸನ್ನ ಚಕ್ರವರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT