ಸೋಮವಾರ, ಏಪ್ರಿಲ್ 12, 2021
30 °C

ಹೊಂಡಗಳ ಮಧ್ಯೆ ಮದ್ದೂರು- ಕೊಪ್ಪ ಮುಖ್ಯ ರಸ್ತೆ: ದುರಸ್ತಿಗೆ ಸಾರ್ವಜನಿಕರ ಆಗ್ರಹ

ಬಿ.ಎ.ಮಧುಕುಮಾರ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ಕೊಪ್ಪ ಗ್ರಾಮದಿಂದ ಮದ್ದೂರು ಪಟ್ಟಣ ಸಂಪರ್ಕಿಸುವ ಸುಮಾರು 20 ಕಿ.ಮೀ.ಯ ರಾಜ್ಯ ಹೆದ್ದಾರಿ ಗುಂಡಿಗಳಿಂದ ತುಂಬಿದ್ದು, ಜನ ತೊಂದರೆ ಅನುಭವಿಸುತ್ತಿದ್ದಾರೆ.

ಈ ರಸ್ತೆಯು ನಾಗಮಂಗಲ–ಮಂಡ್ಯ-ಯಡಿಯೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ.

ರಸ್ತೆಯುದ್ದಕ್ಕೂ ಗುಂಡಿಗಳಿದ್ದು, ವಾಹನ ಸವಾರರು ಪ್ರತಿ ದಿನ ಬಿದ್ದು ಗಾಯಗೊಳ್ಳುತ್ತಿದ್ದಾರೆ. 6 ತಿಂಗಳಿಂದ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಬೆಳತೂರು ಗೇಟ್, ಬೆಸಗರಹಳ್ಳಿ ಅಡ್ಡರಸ್ತೆ, ಅರೆಕಲ್ದೊಡ್ಡಿ ಗೇಟ್, ಗೊಲ್ಲರದೊಡ್ಡಿ ಗ್ರಾಮಗಳ ಬಳಿ ಹೆಚ್ಚು ಗುಂಡಿಗಳಿದ್ದು ಒಂದು ಗುಂಡಿಯನ್ನು ತಪ್ಪಿಸಲು ಹೋದರೆ ಮತ್ತೊಂದು ಗುಂಡಿಗೆ ಬೀಳುತ್ತವೆ.

ಶಾಸಕರು, ಸಂಸದರು, ಹಿರಿಯ ಅಧಿಕಾರಿಗಳು ಇದೇ ಮಾರ್ಗವಾಗಿ ಸಂಚರಿಸಿದರೂ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನಹರಿಸಿಲ್ಲ. ನಾಗಮಂಗಲ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರಗಳಿಗೆ ಸೇರುವ ರಸ್ತೆ ಇದಾಗಿದ್ದು, ಎರಡೂ ಕ್ಷೇತ್ರಗಳ ಶಾಸಕರು ಅಭಿವೃದ್ಧಿಗೆ ಗಮನಹರಿಸಬೇಕು ಎಂದು ರೈತ ಸಂಘದ ಮುಖಂಡರಾದ ಗೊಲ್ಲರದೊಡ್ಡಿ ಅಶೋಕ, ಕೀಳಘಟ್ಟ ನಂಜುಂಡಯ್ಯ, ಪಣ್ಣೆದೊಡ್ಡಿ ವೆಂಕಟೇಶ್ ಒತ್ತಾಯಿಸಿದರು.

ಕೊಪ್ಪ, ಮದ್ದೂರು ಮುಖ್ಯ ರಸ್ತೆ ಸೇರಿದಂತೆ ಇತರ 5 ರಸ್ತೆಗಳ ಅಭಿ ವೃದ್ಧಿಗಾಗಿ ₹ 28.8 ಕೋಟಿ ಪ್ಯಾಕೇಜ್ ಮಂಜೂರಾಗಿತ್ತು. ಅದರಲ್ಲಿ ಕೊಪ್ಪ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆಯ ಬಳಿ 3 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಉಳಿದ ರಸ್ತೆ ಅಭಿ ವೃದ್ಧಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ತಕ್ಷಣ ಕಾಮಗಾರಿ ಪ್ರಾರಂಭಿಸಿ ರಸ್ತೆ ಅಭಿ ವೃದ್ಧಿಪಡಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿ ಯರ್ ಮಹಾದೇವಪ್ಪ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು