ನಾಗಮಂಗಲ: ವೈದ್ಯರಾಗುವವರಿಗೆ ಪ್ರತಿಭೆ, ತಾಳ್ಮೆ ಜೊತೆಗೆ ಸೇವಾ ಮನೋಭಾವ ಮುಖ್ಯವಾಗಿರುತ್ತದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ರಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಿ.ಜಿ.ನಗರದ ಆದಿ ಚುಂಚನಗಿರಿ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದುದ್ದಕ್ಕೂ ಕಲಿಕೆಯನ್ನು ಮುಂದುವರಿಸುವವರು ನಿಜವಾದ ವಿದ್ಯಾರ್ಥಿ ಗಳೆನಿಸಿಕೊಳ್ಳುತ್ತಾರೆ. ಬಾಲಗಂಗಾಧರನಾಥ ಶ್ರೀಗಳು ಆದಿಚುಂಚನಗಿರಿ ಆಸ್ಪತ್ರೆ ಮತ್ತು ಕಾಲೇಜನ್ನು ಗ್ರಾಮೀಣ ಭಾಗದ ಜನರು ಮತ್ತು ವಿದ್ಯಾರ್ಥಿಗಳ ಏಳಿಗೆಗಾಗಿ ಕಟ್ಟಿದ್ದಾರೆ. ವಿದ್ಯಾರ್ಥಿಗಳು ಕೇವಲ ಪದವಿ, ರ್ಯಾಂಕ್ ಪಡೆದರೆ ಸಾಲದು; ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಪದವಿಗೆ ನಿಜವಾದ ಅರ್ಥ ಬರುತ್ತದೆ ಎಂದರು.

ವೈದ್ಯರಾದವರು ದೇಹಕ್ಕೆ ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆ ನೀಡುವ ಜತೆಗೆ, ಮನಸ್ಸನ್ನು ಅರಿತು ಚಿಕಿತ್ಸೆ ನೀಡಬೇಕು. ಏಳಿಗೆಗೆ ಶ್ರಮಿಸಿದ ತಂದೆ–ತಾಯಿಯನ್ನು ಗೌರವಿಸಬೇಕು ಎಂದರು.

ಪದವಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ತಿಮ್ಮಪ್ಪ ಹೆಗ್ಡೆ, ವಿದ್ಯಾರ್ಥಿಗಳು ಜೀವನದಲ್ಲಿ ತಂದೆತಾಯಿ, ಗುರುಗಳು ಮತ್ತು ಸಮಾಜದ ಋಣವನ್ನು ತೀರಿಸುವುದು ಬಹಳ ಮುಖ್ಯ. ಪದವಿ ಪಡೆಯುವ ಮೂಲಕ ಜೀವನದ ಹೊಸ ಅಧ್ಯಾಯ ತೆರೆದುಕೊಳ್ಳುತ್ತಿದೆ. ಮುಂದಿನ ವೃತ್ತಿ ಜೀವನದಲ್ಲಿ ನೀವು ಎಲ್ಲರಿಂದ ಬರುವ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದು ಮುಂದುವರಿದಾಗ ಉತ್ತಮ ವೈದ್ಯರಾಗಲು ಸಾಧ್ಯ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಯುಷ್ ಸೇವೆಗಳ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಮಾತನಾಡಿ, ಸಮಾಜವು ವೈದ್ಯರಿಂದ ನಿಜವಾದ ಸೇವೆಯನ್ನು ಬಯಸುತ್ತದೆ. ಆರೋಗ್ಯಯುತ ಸಮಾಜ ಕಟ್ಟಲು ಶ್ರಮಿಸಿ. ಹೊಸ ಚಿಂತನೆ, ಆವಿಷ್ಕಾರ, ಸಂಶೋಧನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಲಿ. ಜೊತೆಗೆ ಸೇವೆ ಗ್ರಾಮೀಣ ಪ್ರದೇಶಕ್ಕೆ ಅತ್ಯಂತ ಪ್ರಮುಖವಾಗಿದೆ ಎಂದರು.

ವೈದ್ಯಕೀಯ ಶಿಕ್ಷಣದಲ್ಲಿ ರ್ಯಾಂಕ್ ಪಡೆದ ಮತ್ತು ಹೆಚ್ಚು ಅಂಕ ಪಡೆದ ಅಂತಿಮ ವರ್ಷದ ಸಾಧಕರಿಗೆ ಪ್ರಶಸ್ತಿ ಮತ್ತು ಪದಕ ಪ್ರದಾನ ಮಾಡಲಾಯಿತು.

ಆದಿಚುಂಚನಗಿರಿ ಕಾಲೇಜಿನಲ್ಲಿ ಪದವಿ ಪಡೆದ 161 ವಿದ್ಯಾರ್ಥಿಗಳಿಗೆ ನಿರ್ಮಲಾನಂದನಾಥ ಸ್ವಾಮೀಜಿ ಪ್ರಮಾಣ ಪತ್ರ, ಸ್ಮರಣಿಕೆ ನೀಡಿದರು.

ಏಮ್ಸ್ ಕಲಾಕೃತಿ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಡಾ.ಸುನೀಲ್ ಬಾಬು ಮಲ್ಲೇಶ ಅವರು ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕೋವಿಡ್ ವಾರಿಯರ್ಗಳು ಮತ್ತು ಪೋಷಕರ ಅರ್ಪಣಾ ಮನೋಭಾವ ಕುರಿತ ವಿಡಿಯೊ ಪ್ರದರ್ಶಿಸಲಾಯಿತು.

ಆದಿಚುಂಚನಗಿರಿ ವಿವಿಯ ಕುಲಪತಿ ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಉಪಕುಲಪತಿ ಡಾ.ಕೆ.ಭೈರಪ್ಪ, ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಟ್ರಸ್ಟಿ ಡಿ.ದೇವರಾಜ್, ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಡಾ.ಬಿ.ಜಿ.ಸಾಗರ್ ಮತ್ತು ಆದಿಚುಂಚನಗಿರಿ ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.