ಮಂಡ್ಯ: ತಾಲ್ಲೂಕಿನ ದೊಡ್ಡಬಾಣಸವಾಡಿ ಗ್ರಾಮದ ಪಟ್ಟಲದಮ್ಮ ದೇವಿ(ಮಾರಗೌಡನಹಳ್ಳಿ), ಚೌಡೇಶ್ವರಿ ದೇವಿ ಅವರ ಕೊಂಡ ಬಂಡಿ ಹಬ್ಬವನ್ನು ಸುಮಾರು 60 ವರ್ಷಗಳ ಬಳಿಕ ಆಚರಿಸಲಾಗುತ್ತಿದ್ದು, ಒಟ್ಟು ಎಂಟು ದಿನಗಳ ಕಾಲ ಹಬ್ಬ ನಡೆಯಲಿದೆ.

ಈಗಾಗಲೇ ಫೆ.19 ರಿಂದ ಆರಂಭವಾಗಿರುವ ಹಬ್ಬವು ಎಂಟು ದಿನವೂ ವಿವಿಧ ದೇವತಾ ಕಾರ್ಯಗಳು ಜರುಗಲಿವೆ. ಫೆ.22 ರಂದು ಗೋಧೂಳಿ ಸಮಯದಲ್ಲಿ ಹತ್ತಿ ಮರದ ಕಂಬವನ್ನು ತಂದು, ಗ್ರಾಮದ ಮಾರಮ್ಮ ದೇವಸ್ಥಾನದ ರಂಗದಲ್ಲಿ ನೆಡಲಾಗುವುದು. ನಂತರ ಪ್ರತಿದಿನ ಸಂಜೆ ರಂಗಕುಣಿತ ನಡೆಸಲಾಗುವುದು.

ಫೆ.24 ರಂದು ಸಂಜೆ 5 ಗಂಟೆಗೆ ಗ್ರಾಮಸ್ಥರೆಲ್ಲರೂ ಚೌಡೇಶ್ವರಿ ದೇವಸ್ಥಾನದಲ್ಲಿ ಹಣ್ಣು–ಕಾಯಿ ಪೂಜೆ ಮಾಡಿಸುವರು. ಫೆ.25 ಗೋಧೂಳಿ ಸಮಯದಲ್ಲಿ ಕೊಂಡ ಕೀಳಲಾಗುವುದು. ಫೆ.27 ರಂದು ಬೆಳಿಗ್ಗೆ 9.30 ಗಂಟೆಯಿಂದ ಗ್ರಾಮದ ಎಲ್ಲಾ ದೇವಾಲಯಗಳಿಗೆ ಹೋಮ, ಅಭಿಷೇಕ, ಅಲಂಕಾರವನ್ನು ಮಾಡಲಾಗುವುದು. ನಂತರ ಗೋಧೂಳಿ ಸಮಯದಲ್ಲಿ ಬಂಡಿ ಉತ್ಸವ ಹೊರಡಿಸಲಾಗುವುದು. ರಾತ್ರಿ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಿ, ಸೋಮೇಶ್ವರ ದೇವಾಲಯದಿಂದ ಮೀಸಲು ನೀರು ತರಲಾಗುವುದು.

ಫೆ.28 ರಂದು ಬ್ರಾಹ್ಮಿ ಮುಹೂರ್ತದಲ್ಲಿ ದ್ವಾದಶಿ ಪುನರ್ ನಕ್ಷತ್ರದಲ್ಲಿ ಬೆಳಿಗ್ಗೆ 5 ಗಂಟೆಗೆ ಪಟ್ಟಲದಮ್ಮ ದೇವಿ ಕೊಂಡ, ಆನಂತರ ಮಡೆ ಆರತಿ ನೆರವೇರಿಸಲಾಗುತ್ತದೆ. ಸಂಜೆ ಪಟ್ಟಲದಮ್ಮ ದೇವಿ ಪೂಜಾ ಮೆರವಣಿಗೆ ನಡೆಯಲಿದೆ. ಮಾರ್ಚ್ 3ರಂದು ಮಧ್ಯಾಹ್ನ 2.15 ಗಂಟೆಗೆ ಮಾರಮ್ಮ ದೇವಿಗೆ ತಂಬಿಟ್ಟಿನ ಆರತಿ ಹಾಗೂ ಕಂಬವನ್ನು ಹೆಚ್ಚಿಸಲಾಗುತ್ತದೆ. ಮಾರ್ಚ್ 6ರಂದು ಪಟ್ಟಲದಮ್ಮ ದೇವಿಗೆ ತಂಬಿಟ್ಟಿನ ಆರತಿ ಸಮೇತ ಹಬ್ಬವನ್ನು ಸಂಪೂರ್ಣಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.