ಶುಕ್ರವಾರ, ಡಿಸೆಂಬರ್ 4, 2020
22 °C

ಕಾಡಾನೆ ದಾಳಿ: ಭತ್ತದ ಫಸಲು ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಲಗೂರು: ಸಮೀಪದ ದಬ್ಬಹಳ್ಳಿಯಲ್ಲಿ ಕಾಡಾನೆಗಳ ದಾಳಿಯಿಂದಾಗಿ ₹1 ಲಕ್ಷಕ್ಕೂ ಹೆಚ್ಚು ಮೌಲ್ಯದ ಭತ್ತದ ಫಸಲಿಗೆ ಹಾನಿಯಾಗಿದೆ.

ಗ್ರಾಮದ ರೈತ ಪುಟ್ಟರಾಜೇಗೌಡ ಮೂರು ಎಕರೆ ಜಮೀನಿನಲ್ಲಿ ಭತ್ತದ ಬೇಸಾಯ ಮಾಡಿದ್ದರು. ಶಿಂಷಾ ಅರಣ್ಯ ವಲಯದಿಂದ ಬಂದ ಎಂಟು ಕಾಡಾನೆಗಳು ಭತ್ತದ ಫಸಲನ್ನು ತಿಂದು, ತುಳಿದು ಹಾಳು
ಮಾಡಿವೆ.

‘ಸಾಲ ಮಾಡಿ ಬೆಳೆದ ಬೆಳೆ ಕೆಲವೇ ದಿನಗಳಲ್ಲಿ ಕೈ ಸೇರುತ್ತದೆ ಎನ್ನುವಷ್ಟರಲ್ಲೇ ಕಾಡು ಪ್ರಾಣಿಗಳ ದಾಳಿಯಿಂದಾಗಿ ನಾಶವಾಗಿದೆ’ ಎಂದು ಪುಟ್ಟರಾಜೇಗೌಡ ಅಳಲು ತೊಡಿಕೊಂಡರು.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾನಿಗೊಳಗಾದ ಫಸಲಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಹಲಗೂರು ಉಪ ವಲಯ ಅರಣ್ಯಾಧಿಕಾರಿ ನಂದೀಶ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.