ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾನ ಬದುಕು; ಚಳವಳಿಯ ಉದ್ದೇಶ’

Last Updated 4 ಅಕ್ಟೋಬರ್ 2021, 3:11 IST
ಅಕ್ಷರ ಗಾತ್ರ

ಮಂಡ್ಯ: ಚಳವಳಿ ಎನ್ನುವುದು ಮಾತೃ ಸ್ವರೂಪಿಯಾಗಿದ್ದು, ಪ್ರತಿಯೊ ಬ್ಬರೂ ಸಮಾನವಾಗಿ ಬದುಕು ನಡೆಸಬೇಕು ಎಂಬುದೇಚಳವಳಿಯ ಮೂಲ ಉದ್ದೇಶ ಎಂದು ಪದವೀಧರ ಕ್ಷೇತ್ರದ ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್. ಹೇಳಿದರು.

ನಗರದ ರೈತ ಸಭಾಂಗಣದಲ್ಲಿ ಮಂಡ್ಯ ಜಿಲ್ಲೆ ಪದವೀಧರ ವೇದಿಕೆ ಸಹಯೋಗದಲ್ಲಿ ಭಾನುವಾರ ನಡೆದ ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ–2022ರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಶಾಸಕರು, ಅಧಿಕಾರಿಗಳು ಎಂದರೆ ನಮ್ಮನ್ನಾಳುವವರು ಎಂದುಕೊಂಡಿ ದ್ದರು. ಅದನ್ನು ತೆಗೆದು ಹಾಕಿದ್ದೇ ರೈತಸಂಘ, ಡಿಎಸ್‌ಎಸ್‌ ಸೇರಿದಂತೆ ಇತರ ಚಳವಳಿಗಳು ಎಂದುಅವರು ಹೇಳಿದರು.

ಪೊಲೀಸ್‌ ಠಾಣೆಯಲ್ಲಿ ಇಂದು ಕುರ್ಚಿಗಳನ್ನು ಹಾಕಿ ಕುಳಿತು ಮಾತನಾಡುವಂತೆ ಮಾಡಿದ್ದೇ ಈ ಚಳವಳಿಗಳು. ಪ್ರಾಣ ಒತ್ತೆಯಿಟ್ಟು ಬೇಡಿಕೆಗಳನ್ನು ಈಡೇರಿಸುವವರೆಗೂ ಚಳವಳಿ ಮಾಡಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪದವೀಧರ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದೇನೆ ಎಂದು ಅವರು ಹೇಳಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರಗೋಡು ಮಾತನಾಡಿ, ರಾಜಕೀಯ ಎಂಬುದು ಸೇವಾ ಕ್ಷೇತ್ರವಾಗಿ ಉಳಿದಿಲ್ಲ, ಬದಲಿಗೆ ಅದೊಂದು ಲೂಠಿಕೋರರ ಕ್ಷೇತ್ರವಾಗಿ ಉಳಿದಿದೆ. ಹೊಸ ರಾಜಕೀಯ ಹುಟ್ಟಬೇಕು. ಬದಲಾವಣೆ ಆಗಬೇಕು ಎಂದು ಕೆಲಸ ಮಾಡಿದರೆ ಪ್ರಸನ್ನ ಅವರು ಗೆಲವು ಸಾಧಿಸುತ್ತಾರೆ. ನಮ್ಮ ಸಂಘಟನೆಗಳ ಬೆಂಬಲವಿದೆ ಎಂದರು.

ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಯಧುಶೈಲಾ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಮುಖಂಡ ಎಸ್‌.ಸಿ.ಮಧುಚಂದನ್‌, ಎಚ್‌.ಡಿ.ಕೋಟೆ ಶಿಕ್ಷಕರ ಸಂಘದ ಅಧ್ಯಕ್ಷ ಭರತ್‌, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಸ್ವಾಮಿ, ಶಿಕ್ಷಕ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT