ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಆರ್.ಪೇಟೆ: ಉತ್ಸಾಹ ಮೂಡಿಸಿದ ಸಾಕು ನಾಯಿಗಳ ಓಟದ ಸ್ಪರ್ಧೆ

Published 10 ಜುಲೈ 2024, 14:49 IST
Last Updated 10 ಜುಲೈ 2024, 14:49 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಜಾಗನಕೆರೆ ಗ್ರಾಮದಲ್ಲಿ ಸಾಕು ನಾಯಿಗಳ ಓಟದ ಸ್ಪರ್ಧೆಯನ್ನು ಗ್ರಾಮದ ಯುವಕರ ಸಂಘ ಬುಧವಾರ ಆಯೋಜಿಸಿತ್ತು.

ಸ್ಪರ್ಧೆ ವೀಕ್ಷಿಸಲು ಜನರು ಗುಂಪುಗಟ್ಟಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ 50ಕ್ಕೂ ಮಾಲೀಕರು ತಮ್ಮ ಸಾಕು ನಾಯಿಗಳನ್ನು ಕರೆತಂದಿದ್ದರಿಂದ ಉತ್ಸಾಹದ ವಾತವರಣ ನೆಲೆಸಿತ್ತು.

100, 200 ಮೀಟರ್ ಓಟದ ಸ್ಪರ್ಧೇಯಲ್ಲಿ ಕೆಲವು ಸಾಕು ನಾಯಿಗಳು ತಮ್ಮ ಮಾಲೀಕರ ಅಣತಿಯಂತೆ ಓಡಿ ಗುರಿ ಮುಟ್ಟಿದರೆ, ಕೆಲವು ಅರ್ಧದಲ್ಲಿಯೇ ಕೈಚೆಲ್ಲಿದವು. ಅಂತಿಮವಾಗಿ ಕೋಡಿಹಳ್ಳಿ ಗ್ರಾಮದ ಸಾಕು ನಾಯಿ ಪ್ರಥಮ ಸ್ಥಾನ ಪಡೆದು ಟಿ.ವಿ. ಬಹುಮಾನ ಪಡೆದರೆ, ದ್ವಿತೀಯ ಸ್ಥಾನವನ್ನು ಬೊಮ್ಮನಾಯಕನಹಳ್ಳಿ ಸಾಕುನಾಯಿ ಪಡೆದು ಏರ್ ಕೂಲರ್ ಬಹುಮಮಾನ ಪಡೆಯಿತು. ಮೂರನೇಸ್ಥಾನವನ್ನು ಹೊನ್ನಾವರದ ಸಾಕುನಾಯಿ ಪಡೆದು ಫ್ಯಾನ್ ಬಹುಮಾನ ಪಡೆಯಿತು.

ಓಟದ ಸ್ಪರ್ಧೆಗೆ ಮನ್‌ಮುಲ್‌ ನಿರ್ದೇಶಕ ಡಾಲು ರವಿ ಚಾಲನೆ ನೀಡಿ ಮಾತನಾಡಿ, ‘ಬುದ್ಧಿವಂತಿಕೆ ಹಾಗೂ ಸೂಕ್ಷ್ಮ ಗ್ರಹಿಕೆಯುಳ್ಳ ನಾಯಿಗಳು ಪ್ರಾಚೀನ ಕಾಲದಿಂದಲೂ ಮಾನವ ಸಮಾಜದಲ್ಲಿ ಸ್ಥಾನ ಪಡೆದುಕೊಂಡು ಕುಟುಂಬದ ಸದಸ್ಯರಾಗಿವೆ, ಸ್ವಾಮಿನಿಷ್ಠೆ ಮತ್ತು ನಿಯತ್ತಿಗೆ ಮತ್ತೊಂದು ಹೆಸರೇ ಇವು. ಅಂತಹವುಗಳನ್ನು ಒಂದೆಡೆಗೆ ತಂದು ಸ್ಪರ್ಧೆ ಏರ್ಪಡಿಸಿ ಮೇಲಿನ ಪ್ರಥಿಯನ್ನು ಅನಾವರಣಗೊಳಿಸಿರುವದು ಶ್ಲಾಘನೀಯ ಎಂದರು.

ಜಾಗನಕೆರೆ ಅಂಬರೀಶ್, ಕೈಗೋನಹಳ್ಳಿ ಜಯರಾಮು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಡೈರಿಅಶೋಕ್, ದೀಪಕ್, ಯಶವಂತ್, ಕೋಡಿಹಳ್ಲೀ ಸಾಗರ್ ಹಾಗೂ ಸಾಕು ನಾಯಿಗಳ ಮಾಲೀಕರು  ಗ್ರಾಮಸ್ಥರು, ಭಾಗವಹಿಸಿದ್ದರು.

ಕೆ.ಆರ್.ಪೇಟೆ ತಾಲ್ಲೂಕಿನ  ಜಾಗನಕೆರೆ ಗ್ರಾಮದಲ್ಲಿ ಸಾಕು ನಾಯಿಗಳ ಓಟದ ಸ್ಪರ್ಧೆಯಲ್ಲಿಸಾಕು  ನಾಯಿಗಳು ಭಾಗವಹಿಸಿರುವದು.
ಕೆ.ಆರ್.ಪೇಟೆ ತಾಲ್ಲೂಕಿನ  ಜಾಗನಕೆರೆ ಗ್ರಾಮದಲ್ಲಿ ಸಾಕು ನಾಯಿಗಳ ಓಟದ ಸ್ಪರ್ಧೆಯಲ್ಲಿಸಾಕು  ನಾಯಿಗಳು ಭಾಗವಹಿಸಿರುವದು.
ಮನ್ಮುಲ್ ನಿರ್ದೇಶಕ  ಡಾಲು ರವಿ  ಬಹುಮಾನ ವಿತರಿಸಿ ಮಾತನಾಡಿದರು.
ಮನ್ಮುಲ್ ನಿರ್ದೇಶಕ  ಡಾಲು ರವಿ  ಬಹುಮಾನ ವಿತರಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT