ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ | ಆಕಸ್ಮಿಕ ಬೆಂಕಿ: 10 ಎಕರೆ ಕಬ್ಬು ಬೆಳೆ ನಾಶ

Published 15 ಏಪ್ರಿಲ್ 2024, 13:37 IST
Last Updated 15 ಏಪ್ರಿಲ್ 2024, 13:37 IST
ಅಕ್ಷರ ಗಾತ್ರ

ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮದ ಹೊರವಲಯದ 10 ಮೈಲಿ ಕಲ್ಲಿನ ಬಳಿ ಪ್ರದೇಶದ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, 10 ಎಕರೆ ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.

ಗ್ರಾಮದ ರೈತರಾದ ಕಾಳೇಗೌಡ, ಚಿಕ್ಕಲಿಂಗಯ್ಯ, ಜಯರಾಮು, ಕೆಂಪೇಗೌಡ, ಚೌಡಯ್ಯ, ಚಂದ್ರಮ್ಮ, ದೇವಿಪುರದ ಮಲ್ಲೇಶ್ ಹಾಗೂ ಮದ್ದೂರು ತಾಲ್ಲೂಕಿನ ಕರಡಕೆರೆ ಗ್ರಾಮಗಳ ರೈತರು ಸೇರಿದಂತೆ ಹಲವರ ಕಬ್ಬಿನ ಗದ್ದೆಗಳು ಸುಟ್ಟು ನಾಶವಾಗಿವೆ. ಭಾನುವಾರ ಸಂಜೆ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸುಮಾರು ಹತ್ತು ಎಕರೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ.

ಸ್ಥಳೀಯರು ಬೆಂಕಿ ಕಂಡು ನಂದಿಸುವ ಪ್ರಯತ್ನ ನಡೆಸಿದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗೆ ಕಬ್ಬು ಸುಟ್ಟು ಕರಕಲಾಗಿದೆ.

‘ಭೀಕರ ಬರಗಾಲದ ನಡುವೆಯೂ ಕೂಳವೆಬಾವಿಯ ನೀರಿನಿಂದ ಕಬ್ಬು ಬೆಳೆದಿದ್ದೆವು. ಬೆಂಕಿ ಬಿದ್ದ ಪರಿಣಾಮ ₹6 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಹಾಗಾಗಿ ತಾಲ್ಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು’ ಎಂದು ರೈತರಾದ ಕಾಳೇಗೌಡ, ಚಿಕ್ಕಲಿಂಗಯ್ಯ, ಜಯರಾಮು, ಕೆಂಪೇಗೌಡ, ಚೌಡಯ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT